?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಮಾಗಡಿಯಲ್ಲೂ ಮೈಸೂರು ಮಾದರಿ ಕ್ರೀಡಾ ಕೂಟ

ಮಾಗಡಿ

ಮೈಸೂರಿನ ದಸರಾ ಕ್ರೀಡಾ ಕೂಟದಂತೆ ಈ ಬಾರಿಯಿಂದ ಮಾಗಡಿಯಲ್ಲೂ ಆಯೋಜಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ, ಮೈಸೂರಿನ ದಸರಾ ವೇಳೆ ನಡೆಯುವ ದಸರಾ ಕ್ರೀಡಾಕೂಟ ಪ್ರಪಂಚದ ಗಮನ ಸೆಳೆದಿದೆ. ಅದೇ ರೀತಿ ಮಾಗಡಿಯಲ್ಲೂ ನಡೆಸಲಾಗುವುದು. ತಾಲೂಕಿನ ವಿದ್ಯಾರ್ಥಿಗಳು, ಸಾರ್ವಜನಿಕರು ಮೈಸೂರಿನ ದಸರಾ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿ ಪ್ರಶಸ್ತಿ ತರುವಂತೆ ದೈಹಿಕ ಶಿಕ್ಷಣ ಶಿಕ್ಷಕರು ತಯಾರಿಸಬೇಕು. ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಒಲಂಪಿಕ್ಸ್ ಗೇಮ್‌ನಲ್ಲಿ ಚೀನಾ, ಅಮೇರಿಕ ದೇಶಗಳು ಹೆಚ್ಚು ಬಹುಮಾನ ಪಡೆದುಕೊಂಡಿವೆ, ಚಿಕ್ಕ ದೇಶಗಳು ಅಥ್ಲೆಟಿಕ್‌ನಲ್ಲಿ ಪ್ರಶಸ್ತಿ ಪಡೆದಿವೆ. ಆದರೆ, ನಮ್ಮ ದೇಶ ಕ್ರೀಡೆಯಲ್ಲಿ ಬಹುಮಾನಗಳು ಪಡೆದಿರುವುದು ಕಡಿಮೆ. ಈ ಸಂಬಂಧ ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಂದಿನ ದಿನಗಳಲ್ಲಿ ಇದೆ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದರು.

ಹಲವು ಕ್ರೀಡಾ ಕೂಟದಲ್ಲಿ ಭಾಗವಹಿಸಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಬಸವರಾಜು, ಮಲ್ಲಿಕಾರ್ಜುನ ಸ್ವಾಮಿ, ಜಯರಾಮು, ದಯಾನಂದಮೂರ್ತಿ, ಗಂಗಾಧರ್, ರಾಮಸ್ವಾಮಿ, ಮುನಿಯಪ್ಪ ಇತರರು ಇದ್ದರು.