ಮಾಗಡಿ
ತಾಲೂಕಿನ ಅಜ್ಜನಹಳ್ಳಿ, ಸಿದ್ದೇಶ್ವರ ಕಾಲನಿ, ಗುದ್ದಲಹಳ್ಳಿಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿತು.
ಈ ಗ್ರಾಮಗಳ ಜನರ ಸ್ಥಿತಿಗತಿ, ಹಕ್ಕುಪತ್ರ ಸಿಗದಿರುವುದು, ಸಮಸ್ಯೆಗಳ ಬಗ್ಗೆ ವಿಜಯವಾಣಿ ಪತ್ರಿಕೆ ಆ.23ರ ಸಂಚಿಕೆಯಲ್ಲಿ ‘ಸಮಸ್ಯೆಗಳ ನಡುವೆ ಬದುಕು’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಜಿಪಂ ಯೋಜನಾ ನಿರ್ದೇಶಕ ಎಚ್.ಎನ್. ಮಂಜುನಾಥ್, ಎಡಿಪಿಪಿ ಜಗದೀಪ್ ಪಿಡಿಒ ಗಂಗಣ್ಣ ಅವರು ಗ್ರಾಮಕ್ಕೆ ತೆರಳಿ ಅಲ್ಲಿನ ನಿವಾಸಿಗಳೊಂದಿಗೆ ಚರ್ಚಿಸಿ ನರೇಗಾ ಯೋಜನೆ ಮಾಹಿತಿ ನೀಡಿ ಕೂಲಿ ಕೆಲಸ ನೀಡುವ ಬಗ್ಗೆ ಬೇಡಿಕೆ ಪತ್ರ ಪಡೆದರು.
ಇನ್ನು ಗ್ರಾಮದಲ್ಲಿ ನೀಡಿರುವ ನಿವೇಶನಗಳಿಗೆ ಖಾತೆ ಮಾಡಿಕೊಡುವ ಬಗ್ಗೆ, ವಸತಿ ಸಮಸ್ಯೆ ಬಗ್ಗೆ, ರಸ್ತೆ, ಚರಂಡಿ, ವಿದ್ಯುತ್ ನೀರು ಸೇರಿ ಮೂಲಸೌಲಭ್ಯ ಸೇರಿ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು.
ಯೊಜನಾ ನಿರ್ದೇಶಕ ಎಚ್.ಎನ್. ಮಂಜುನಾಥ ಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಪಿಆರ್‌ಡಿ ಯೋಜನೆಯಡಿ ರಸ್ತೆ ಮಾಡಲಾಗಿದ್ದು ಕಿತ್ತು ಹೋಗಿರುವುದರಿಂದ ನರೇಗಾ ಯೋಜನೆಯಡಿ ಮಾಡಲು ಅವಕಾಶವಿದೆ, ಗ್ರಾಮದಲ್ಲಿ ಕುಡಿಯು ನೀರು, ದೀಪ ಇದ್ದು ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪು ಅಳವಡಿಸಲಾಗಿದೆ. ಕೂಡಲೇ ಸಂಪಕ್ ನೀಡಲಾಗುವುದು ಎಂದರು.
ಗ್ರಾಮದ ಜನರು ವಲಸೆ ಹೊಗುವುದನ್ನು ತಪ್ಪಿಸಲು 4 ಜಾಬ್ ಕಾರ್ಡ್ ನೀಡಲಾಗಿದೆ. 19 ಕುಟುಂಬಗಳ ಪೈಕಿ 5 ಕುಟುಂಬ ಸದಸ್ಯರು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ. ಗ್ರಾಮದ ಕೆಲವರಿಗೆ ನಿವೇಶನದ ಹಕ್ಕುಪತ್ರ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ರಸ್ತೆಗಳ ಡಾಂಬರೀಕರಣಕ್ಕೆ ನರೇಗಾದಲ್ಲಿ ಸಾಧ್ಯವಿಲ್ಲ. ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ಕಾಂಕ್ರ್ರಿಟ್ ರಸ್ತೆ ನಿರ್ಮಿಸಲಾಗುವುದು. ಗ್ರಾಮದ ಚರಂಡಿ ಸ್ವಚ್ಛಗೆತೆ ಪಂಚಾಯಿತಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಇಸಿ ಸಂಯೋಜಕ ಸಿ.ಜಿ.ಅರುಣ್ ಕುಮಾರ್, ಪಿಡಿಒ ಗಂಗಯ್ಯ, ತಾಂತ್ರಿಕ ಸಂಯೋಜಕ ಮಹೇಶ್, ರವಿಕುಮಾರ್, ತಾಂತ್ರಿಕ ಅಭಿಯಂತೆ ಐಶ್ವರ್ಯ ಇತರರು ಇದ್ದರು.
ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಅರಿಯಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗಳಿಂದ ಜಾಗ ಮಂಜೂರಾತಿಯಾಗಬೇಕು. ನಂತರ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಕ್ಕುಪತ್ರ ನೀಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು.
ಚಂದ್ರು, ತಾಪಂ ಇಒ
ಹಕ್ಕುಪತ್ರ ಇದ್ದವರಿಗೆ ಇ-ಖಾತೆ ಮಾಡಿಕೊಡಲಾಗಿದೆ. ಉಳಿದವರಿಂದ ದಾಖಲೆಗಳನ್ನು ಸಂಗ್ರಹಿಸಿ ಇ-ಖಾತೆ ಮಾಡಿಕೊಡಲಾಗುವುದು. 12 ಮಂದಿ ಗುಡಿಸಲು ಹಾಕಿಕೊಂಡಿದ್ದು. ಬೇಕಾದ ವೇಳೆ ಬಂದು ತೆರಳುತ್ತಾರೆ. ಶುದ್ದ ಕುಡಿಯುವ ನೀರು ಘಟಕ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಶುಕ್ರವಾರ ಗ್ರಾಮದ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ.
ಗಂಗಯ್ಯ, ಪಿಡಿಒ