ಜಿಲ್ಲೆ

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ‌ ಆರೋಪಿಗಳ ಬಂಧನ

ಮಾಗಡಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳು ಬಂಧಿಸಿ 625 ಗ್ರಾಂ ಗಾಂಜಾವನ್ನು
ಮಾಗಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಹೊಂಬಾಳಮ್ಮನಪಾಳ್ಯದ ಶಿವು [21], ಚಕ್ರಭಾವಿ ಗ್ರಾಮದ ರವಿಕುಮಾರ [23], ಹುಲಿದುರ್ಗದ ವಾಜರ ಪಾಳ್ಯ ಗ್ರಾಮದ ದಿನೇಶ [26] ಬಂದಿತರು.

ಪಟ್ಟಣದ ಗಾಂಧಿ ಸರ್ಕಲ್ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಮಾಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಜಿ.ವೈ.ಗಿರಿರಾಜು
ಹಾಗೂ ಸಿಬ್ಬಂದಿ ಗಾಂಜಾ ಮಾರಾಟ ಮಾಡುವ
ವೇಳೆ ದಾಳಿ ನಡೆಸಿ 625 ಗ್ರಾಂ ಗಾಂಜಾ
ವಶಪಡಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.