ಜಿಲ್ಲೆ

ಕರು ಹುಡಕುಲು ಹೋಗಿ ವಿದ್ಯುತ್ ಸ್ಪರ್ಶಿಸಿ ಸಾವು ತಂದುಕೊಂಡರು

ಮಾಗಡಿ: ತಾಲೂಕಿನ ಬಾಚೇನಹಟ್ಟಿ ಗ್ರಾಮದ ನಿವಾಸಿ ಚಿಕ್ಕಮುದ್ದಗೆರೆ ವಿಎಸ್ಎಸ್ಎನ್ ಕಾರ್ಯದರ್ಶಿ ಆನಂದ್ (48)  ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ತಮ್ಮ ಜಮೀನಿನ ಬಳಿ ಮೇಯುತ್ತಿದ್ದ ಕರು ಕಾಣಿಸದೇ ಇದ್ದ ವೇಳೆ ಹುಡುಕಾಟ ನಡೆಸುತ್ತಿದ್ದಾಗ, ಜಮೀನೊಂದಕ್ಕೆ ಅಳವಡಿಸಲಾದ ವಿದ್ಯುತ್ ತಂತಿ ಬೇಲಿ ತಗುಲಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಸಾವನ್ನಪಿದ್ದಾರೆ.
ವಿಷಯ ತಿಳಿದ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು. ಮೃತ ಶವವನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಕೋಡೋಯ್ಯಲಾಗಿದೆ.