ಮಾಗಡಿ: ಯುವಕನೊಬ್ಬ ಕಾರಿನಲ್ಲೇ ಮೃತಪಟ್ಟಿರುವುದು ಸೋಲೂರು ಹೋಬಳಿ ವ್ಯಾಪ್ತಿಯ ಬಾಣವಾಡಿ ಕೋಡಿ ಬಸವಣ್ಣ ದೇವಾಲಯದ ರಸ್ತೆ ತಿರುವಿನ ಬಳಿ ಮಂಗಳವಾರ ನಡೆದಿದೆ.
ಮೃತನನ್ನು ಬೆಂಗಳೂರಿನ ನಾಗರಬಾವಿ ಐಟಿಐ ಲೇಔಟ್ ನಿವಾಸಿ ಎಸ್.ರಾಕೇಶ್ ಶರ್ಮ (35) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಕಾರಿನ ಹಿಂಬದಿ ಸೀಟಿನ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಎಷ್ಟು ಹೊತ್ತಾದರೂ ಹೊರಗೆ ಬಾರದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹದ ಬಳಿ ಲೋಟಸ್ ವೆಂಚರ್ ಕಂಪನಿಯ ಮಾರ್ಕೇಟಿಂಗ್ ನಿರ್ದೇಶಕ ಎನ್ನುವ ಗುರುತಿನ ಚೀಟಿ ಪತ್ತೆಯಾಗಿದೆ. ವಿಧಿವಿಜ್ಞಾನ ಶೋಧನಾ ಅಧಿಕಾರಿ ಮತ್ತು ವೈದ್ಯರ ತಂಡದಿಂದಲೂ ಪರಿಶೀಲನೆ ನಡೆದಿದೆ.