ಜಿಲ್ಲೆ

ಚಿರತೆ ದಾಳಿಗೆ ಮೇಕೆ ಬಲಿ

ಗಂಗಾಧರ ಬಿ ವಿ

ರಾಮನಗರ: ಮನೆ ಮುಂದೆ ಮೇಕೆಯೊಂದು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಅಜ್ಜಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಕುಮಾರ್ ಎಂಬುವರ ಮನೆ ಮುಂದೆ ಇದ್ದ ಮೇಕೆ ಮೇಲೆ ಚಿರತೆ ದಾಳಿ ನಡೆಸಿ ರಕ್ತ ಹೀರಿ ಪರಾರಿಯಾಗಿದೆ.

ಕಳೆದ ಕೆಲವು ದಿನಗಳಿಂದ ಚಿರತೆ ನಿರಂತರ ದಾಳಿ ನಡೆಸುತ್ತಿದ್ದು, ಮೂರು ಮೇಕೆಗಳನ್ನು ಕುಮಾರ್ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಸೆರೆಗೆ ಕ್ರಮವಹಿಸುವಂತೆ ಅಜ್ಜಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.