ಜಿಲ್ಲೆ

ಪ್ರತಿಮೆಯೂ ಇಲ್ಲ, ಮಾದರಿಯೂ ಆಗಲಿಲ್ಲ ಲಕ್ಕಪ್ಪನಹಳ್ಳಿ ಗ್ರಾಮಸ್ಥರ ದೂರು

ಗಂಗಾಧರ ಬಿ ವಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ವಿಧಾನಸೌಧದ ನಿರ್ವಾತೃ, ವಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 115ನೇ ಜನ್ಮದಿನ ಆಚರಣೆ ಸಂದರ್ಭದಲ್ಲಿ ಅವರ ಹುಟ್ಟೂರು ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಲಕ್ಕಪ್ಪನಹಳ್ಳಿಯಲ್ಲಿ ಅವರ ಪ್ರತಿಮೆ ನಿರ್ವಾಣದ ಕನಸು ನನಸಾಗಲೇ ಇಲ್ಲ. ಜತೆಗೆ ಗ್ರಾಮದ ಅಭಿವೃದ್ಧಿಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ.ರೇಣುಕಾಚಾರ್ಯ ಅವರು ಲಕ್ಕಪ್ಪನಹಳ್ಳಿಗೆ ಭೇಟಿ ನೀಡಿ 1.25 ಕೊಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ವಾಣ ಹಾಗೂ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಪ್ರತಿಮೆ ನಿರ್ಮಾಣ ಕನಸಾಗಿಯೇ ಉಳಿದಿದೆ.

ಕುಂಟುತ್ತಾ ಸಾಗಿದ ಗ್ರಾಮವಿಕಾಸ

ಹುಟ್ಟೂರು ಅಭಿವೃದ್ಧಿಗೆಂದೇ 2016-17ನೇ ಸಾಲಿನಲ್ಲಿ ಗ್ರಾಮದಲ್ಲಿ ಗ್ರಾಮವಿಕಾಸ ಯೋಜನೆಯಲ್ಲಿ ಸಿಮೆಂಟ್ ರಸ್ತೆ, ಚರಂಡಿ, ದೇವಾಲಯ ಅಭಿವೃದ್ಧಿ, ಅಂಗನವಾಡಿ ಅಭಿವೃದ್ಧಿಗಾಗಿ 75 ಲಕ್ಷ ರೂ. ನೀಡಲಾಯಿತು. ಆದರೆ ನಿರ್ವಹಣೆ ಹೊತ್ತ ಕೆಆರ್‌ಐಡಿಎಲ್ ಕಾಮಗಾರಿ ಪೂರ್ಣಗೊಳಿಸಿಲ್ಲ. ನತ್ಯಾಜ್ಯ ವಿಲೇವಾರಿ ಟಕ, ಶಾಲೆಗೆ ಆಟದ ಪರಿಕರ ಅಳವಡಿಕೆ, ಒಂದಷ್ಟು ಚರಂಡಿ, ರಸ್ತೆ ಕೆಲಸಗಳು ಬಾಕಿ ಉಳಿದಿವೆ. ಅಂಗನವಾಡಿ, ಗ್ರಾಮದ ಮಧ್ಯಭಾಗದಿಂದ ಹನುಮಂತಯ್ಯ ಅವರ ಮನೆವರೆಗಿನ ಸಿಮೆಂಟ್ ರಸ್ತೆ ವಾತ್ರ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಕುಂಟುತ್ತಲೇ ಸಾಗಿವೆ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.

ಇನ್ನಷ್ಟು ಅಭಿವೃದ್ಧಿ ಅಗತ್ಯ

ಬನ್ನಿಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಲಕ್ಕಪ್ಪನಹಳ್ಳಿಯಲ್ಲಿ 5 ಬೀದಿಗಳಿದ್ದು 160ಕ್ಕೂ ಹೆಚ್ಚಿನ ಕುಟುಂಬಗಳಿವೆ. 950 ಜನಸಂಖ್ಯೆ ಹೊಂದಿದೆ. ಗ್ರಾಮದ ಎರಡು ಬೀದಿಗಳು ಮಾತ್ರ ಸಿಮೆಂಟ್ ಕಂಡಿವೆ. ಉಳಿದವು ಗುಂಡಿ, ಕಲ್ಲುಗಳಿಂದ ಕೂಡಿವೆ. ಚರಂಡಿಗಳು ಸಮರ್ಪಕವಾಗಿಲ್ಲ, ಕೆಲವು ಬೀದಿಗಳಲ್ಲಿ ರಸ್ತೆಗೆ ಚರಂಡಿ ನೀರು ಹರಿಯುತ್ತದೆ. ಹಳೇ ಕಲ್ಲಿನ ಚಪ್ಪಡಿಗಳನ್ನು ಈಗಲೂ ಕಾಣಬಹುದಾಗಿದೆ.

ನಕಾಶೆ ರಸ್ತೆ ಒತ್ತುವರಿ ತೆರವು, ಸ್ಮಶಾನ ಅಭಿವೃದ್ಧಿ, ಕೆಂಗಲ್ ಹನುಮಂತಯ್ಯ ಸವಾಧಿ ರಸ್ತೆ ಅಭಿವೃದ್ಧಿ, ಕೆರೆ, ಕಾಡಿನ ರಸ್ತೆ ಅಭಿವೃದ್ಧಿ, ಬೀದಿ ದೀಪಗಳಿಗೆ ಎಲ್‌ಇಡಿ ವಿದ್ಯುತ್ ದೀಪ ಅಳವಡಿಕೆ, ನಿರ್ವಾಣ ಆಗಿರುವ ಚರಂಡಿ ಮೇಲ್ಬಾಗಕ್ಕೆ ಸ್ಲ್ಯಾಬ್ ಹಾಕುವುದು, ಸಮುದಾಯ ಭವನಕ್ಕೆ ಸರ್ಕಾರಿ ಜಾಗ ಗುರುತಿಸಿಕೊಡುವುದು, ಬಾಕಿ ಉಳಿದಿರುವ ರಸ್ತೆಗಳಿಗೆ ಸಿಮೆಂಟ್ ರಸ್ತೆ, ಚರಂಡಿ ನಿರ್ವಾಣ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮಸ್ಥರು.

ಲಕ್ಕಪ್ಪನಹಳ್ಳಿ ಹೆಸರಿಗಷ್ಟೇ ವಾಜಿ ಮುಖ್ಯಮಂತ್ರಿಗಳ ತವರು ಗ್ರಾಮ. ಕೆಂಗಲ್ ಹನುಂತಯ್ಯ ಅವರ ಪ್ರತಿಮೆ ನಿರ್ಮಾಣ, ವಾದರಿ ಗ್ರಾಮದ ಭರವಸೆ ಹುಸಿಯಾಗಿದೆ. ನರೇಗಾ ಯೋಜನೆ ಮೂಲಕ ಹಂತ ಹಂತವಾಗಿ ಗ್ರಾಮ ಅಭಿವೃದ್ಧಿಯಡೆಗೆ ಸಾಗುತ್ತಿದೆ. 75 ಲಕ್ಷ ರೂ.ಗಳ ಗ್ರಾಮ ವಿಕಾಸ ಯೋಜನೆ ಆರೇಳು ವರ್ಷದಿಂದಲೂ ನಡೆಯುತ್ತಲೇ ಇದೆ.

ರವಿಕುವಾರ್, ಗ್ರಾಪಂ ಸದಸ್ಯ, ಲಕ್ಕಪ್ಪನಹಳ್ಳಿ

ಲಕ್ಕಪ್ಪನಹಳ್ಳಿಯಲ್ಲಿ ಆಗಿರುವ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಗ್ರಾಪಂಗೆ ಹಸ್ತಾಂತರಿಸಿಲ್ಲ. ನರೇಗಾ ಸೇರಿ ಇತರ ಯೋಜನೆಗಳಲ್ಲಿ ಬಾಕಿ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಗ್ರಾಪಂ ಮುಂದಾಗಿದೆ.

ಜಯಶಂಕರ್, ಪಿಡಿಒ ಬನ್ನಿಕುಪ್ಪೆ ಗ್ರಾಪಂ

ಲಕ್ಕಪ್ಪನಹಳ್ಳಿಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಘನತ್ಯಾಜ್ಯ ವಿಲೇವಾರಿ ಘಟಕ, ಶಾಲೆಯಲ್ಲಿ ಮಕ್ಕಳ ಆಟಿಕೆ ಜೋಡಣೆ ಕಾರ್ಯ, ಚರಂಡಿ ಕಾಮಗಾರಿ ಬಾಕಿಯಿದ್ದು ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಕೆಆರ್‌ಐಡಿಎಲ್ ಅಧಿಕಾರಿಗಳು.