ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಜಿ.ಎಚ್.ರಾಮಯ್ಯ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾತ್ಯ ಪರಿಷತ್ತು ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬ್ರಿಟಿಷ್‌ರ ಆಡಳಿತದ ಅವಧಿಯಲ್ಲಿ ಆಂಗ್ಲ ಭಾಷೆಯ ಹೊಡೆತ ತಪ್ಪಿಸಲು ನಾಡು, ನುಡಿ, ಸಂಸ್ಕೃತಿಯನ್ನು ಪ್ರವರ್ಧನೆ ಮಾಡಬೇಕೆನ್ನುವ ಉದ್ಧೇಶದಿಂದ ಅವಿರತವಾಗಿ ಶ್ರಮಿಸುತ್ತಿದ್ದು, ತುಂಬ ಎತ್ತರಕ್ಕೆ ಬೆಳೆದು ನಾಡು ನುಡಿ, ಗಡಿ ಹಿಡಿತ ಸಾಧಿಸಿ. ಕನ್ನಡಿಗರಿಗೆ ಸಿದ್ದ ಜೌಷಧಿಯಾಗಿದೆ.
ಜತೆಗೆ ಕನ್ನಡಿಗರ ಮನೆ ಮನಸ್ಸಿನಲ್ಲಿ ಇರುವ ಸಂಸ್ಥೆಯಾಗಿದ್ದು, ಹಲವು ಸಾಹಿತ್ಯದ ಕೊಡುಗೆಗಳನ್ನು ನೀಡುವ ಮೂಲಕ ಹೆಮ್ಮರವಾಗಿ ಬೆಳೆದು ಬೋಧನಾಂಗ, ಪ್ರಕಟಣಾಂಗ, ಸಂಶೋಧನಾಂಗಗಳನ್ನು ತೆರೆದು ರಾಜ್ಯಾದ್ಯಂತ ವಿಸ್ತರಿಸಿ ಮನೆ, ಮನಗಳಿಗೆ ಸಾಹಿತ್ಯವನ್ನು ಉಣ ಬಡಿಸಿದ ಕೀರ್ತಿ ಸಾತ್ಯ ಪರಿಷತ್ತಿಗೆ ಸಲುತ್ತದೆ ಎಂದರು.
ಕರ್ನಾಟಕವನ್ನು ಏಕೀಕರಣ ಮಾಡಿ ಕಸಾಪ ಎಂಬ ಪ್ರಾತಿನಿಧಿಕ ಸಂಸ್ಥೆ ಕಟ್ಟಿ ಕನ್ನಡದ ಕಂಪನ್ನು ಎಲ್ಲಾ ಕಡೆ ಹರಡಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಸುದೀರ್ಘ ಇತಿಹಾಸರುವ ಕನ್ನಡ ಭಾಷೆ ಅನನ್ಯ ಮತ್ತು ಅಜರಾಮರವಾದುದು. ಮಧುರವಾಗಿರುವ ಭಾಷೆ ನಮ್ಮ ಕನ್ನಡವಾಗಿದ್ದು, ಈ ಭಾಷೆಯಲ್ಲಿ ಸಮೃದ್ಧತೆ ಅಡಗಿದೆ ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕ ಡಾ. ನರಸಿಂಹ ಸ್ವಾಮಿ ಎಸ್.ವಿ , ಜನಪದ ಸಂಶೋಧಕರಾದ ಡಾ. ಎಂ. ಬೈರೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ರಾಜಶೇಖರ್, ಕೋಶಾಧ್ಯಕ್ಷ ಕೆ. ರಾಜೇಶ್, ರಾಮನಗರ ತಾಲೂಕು ಕಸಾಪ ಅಧ್ಯಕ್ಷ ಬಿ.ಟಿ.ದಿನೇಶ್, ನಿವೃತ್ತ ಉಪನ್ಯಾಸಕ ಕರೀಗೌಡ, ನಿವೃತ್ತ ಪ್ರಾಂಶುಪಾಲ ವನರಾಜು, ಕಸಬಾ ಘಟಕದ ಅಧ್ಯಕ್ಷ ಡೈರಿ ವೆಂಕಟೇಶ, ಕೂಟಗಲ್ ಘಟಕದ ಅಧ್ಯಕ್ಷ ದೇವರಾಜು, ಕಸಾಪ ಸಂಚಾಲಕ ಸಮದ್, ಪುಟ್ಟಸ್ವಾಮಿ ಚಕ್ಕರೆ, ಹಿರಿಯರಾದ ಶಿವಣ್ಣ, ಹಾಜರಿದ್ದರು. ಕಾರ್ಯಕ್ರಮದಲ್ಲಿ ಗೀತಗಾಯನವನ್ನು ಗೋಂವಿದಹಳ್ಳಿ ಶಿವಣ್ಣ, ಚನ್ನಪಟ್ಟಣ ತಾಲೂಕು ಗೌರವ ಕಾರ್ಯದರ್ಶಿ ರಾಮಕೃಷ್ಣಯ್ಯ, ಸಮದ್ ನಡೆಸಿಕೊಟ್ಟರು.