ಜಿಲ್ಲೆ

ಸಮಸ್ಯೆ ನಿವಾರಣೆಗೆ ಅದಾಲತ್ ಉಪಯುಕ್ತ ತಾಪಂ ಇಒ ಪ್ರದೀಪ್ ಅಭಿಪ್ರಾಯ

ಗಂಗಾಧರ ಬಿ ವಿ

ರಾಮನಗರ

ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಕಂದಾಯ ಅದಾಲತ್ ಕಾರ್ಯಕ್ರಮ ಜನರಿಗೆ ಉಪಯುಕ್ತವಾಗಿದೆ ಎಂದು ರಾಮನಗರ ತಾಪಂ ಇಒ ಪ್ರದೀಪ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ, ಬಿಳಗುಂಬ ಗ್ರಾಪಂ ಕೇಂದ್ರದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ, ತಾಪಂ, ಗ್ರಾಪಂ ವತಿಯಿಂದ ಆಯೋಜಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದಾಲತ್‌ನಲ್ಲಿ ಕೇವಲ ಭೂಮಿ ಸಮಸ್ಯೆ ಮಾತ್ರವಲ್ಲ, ಸಾರ್ವಜನಿಕರು ಗ್ರಾಮದ ಮೂಲಭೂತ ಸೌಲಭ್ಯದ ಸಮಸ್ಯೆ, ಇ-ಖಾತೆ, ಪಿಂಚಣಿ, ಮಾಸಾಶನ, ವೃದ್ಧಾಪ್ಯ ವೇತನ ಇನ್ನಿತರ ಸರ್ಕಾರದ ಸೇವೆಗಳ ಬಗ್ಗೆ ಸಾರ್ವಜನಿಕರು ಸಮಸ್ಯೆ ಇದ್ದರೆ ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದು.

ಎಲ್ಲ ಇಲಾಖೆಗಳ ಅಧಿಕಾರಿಗಳು, ಕಂದಾಯ, ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿರುವ ಕಾರಣ ಸಮಸ್ಯೆ ಬಹು ಬೇಗನೆ ಬಗೆಹರಿಸಲು ಸಹಾಯವಾಗುತ್ತದೆ. ಸಾರ್ವಜನಿಕರು ನಗರ ಪ್ರದೇಶದ ಕಚೇರಿಗೆ ಬರುವುದು ತಪ್ಪುತ್ತದೆ. ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ರಸ್ತೆ, ಮಾಸಾಶನ, ಇ-ಖಾತೆ, ಸ್ಮಶಾನ ಮತ್ತಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅರ್ಜಿ ನೀಡಿದರು. ಕೆಲವೊಂದು ಸಮಸ್ಯೆಗಳನ್ನು ಕಂದಾಯ ಮತ್ತು ಗ್ರಾಪಂ ಅಧಿಕಾರಿಗಳು, ತಾಪಂ ಇಒ, ಉಪ ತಹಸೀಲ್ದಾರ್ ಶಬೀನ್‌ತಾಜ್ ಸಮ್ಮುಖದಲ್ಲಿ ಬಗೆಹರಿಸಿದರು.

ಉಪ ತಹಸೀಲ್ದಾರ್ ಶಬೀನ್‌ತಾಜ್, ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಾಜಣ್ಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಜೀರ್ ಅಹ್ಮದ್, ರಾಜಸ್ವ ನಿರೀಕ್ಷಕ ನಾಗರಾಜು, ಪಿಡಿಒ ಮಹೇಶ್, ಕಾರ್ಯದರ್ಶಿ ಉಮೇಶ್, ಗ್ರಾಪಂ ಸದಸ್ಯರಾದ ನವೀನ್‌ಗೌಡ, ಬೋರೇಗೌಡ, ನಾಗಮ್ಮ, ಜಯಮ್ಮ, ಪರಿಸರ ಪ್ರೇಮಿ ರಾಜೇಂದ್ರ, ಗ್ರಾಮ ಲೆಕ್ಕಿಗರಾದ ಪರಮೇಶ್, ಮುಬಾರಕ್, ಚನ್ನಮ್ಮಇದ್ದರು.