ಜಿಲ್ಲೆ

ಕನಕಪುರ ಬಳಿ ಭೀಕರ ಅಪಘಾತ ಚಂದಾಪುರ ಮೂಲದ ಆರು ಮಂದಿ ಸಾವು

ಸಾತನೂರು ಬಳಿಯ ಕೆಮ್ಮಾಳೆ ಗೇಟ್ ಬಳಿ ಘಟನೆ

ಕಾರಿನಲ್ಲಿದ ಆರು ಮಂದಿ ಸಾವು

ರಾಮನಗರ: ಕನಕಪುರ ತಾಲೂಕಿನ ತಾಲೂಕಿನ ಸಾತನೂರು ಬಳಿ ಕೆಮ್ಮಾಳೆ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ವಾಲೀಸ್ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾತನೂರಿನಿಂದ ಮುತ್ತತ್ತಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್   ಮುತ್ತತ್ತಿಕಡೆಯಿಂದ ಬರುತ್ತಿದ್ದ ಕ್ವಾಲೀಸ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಬಸ್ ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. 
ಮೃತರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಮಳವಳ್ಳಿ ಮಾರ್ವವಾಗಿ  ಬೆಂಗಳೂರಿಗೆ ತೆರಳುತ್ತಿದ್ದ ಕ್ವಾಲೀಸ್ ನಲ್ಲಿದ್ದ ಚಂದಾಪುರ ಮೂಲದ ನಾಗೇಶ್, ಪುಟ್ಟರಾಜು, ಜೋರ್ತಿಲಿಂಗ, ಗೋವಿಂದ, ಕುಮಾರ್ ಎಂದು 5 ಮಂದಿಯನ್ನು ಗುರುತಿಸಲಾಗಿದ್ದು, ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಕಾರು ಜೋರ್ತಿಲಿಂಗ ಅವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಘಟನೆಯಲ್ಲಿ ಕೆಸ್ ಆರ್ ಟಿಸಿ ಬಸ್ ಚಾಲಕನಿಗೂ ಗಂಭೀರವಾಗಿ ಗಾಯವಾಗಿದೆ, ಅಲ್ಲದೆ, ಬಸ್ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 
ವಿಷಯ ತಿಳಿಯುತ್ತಿದ್ದಂತೆ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತರನ್ನು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ  ಎಂದು ಪೊಲೀಸ್ ಮೂಲಗಳು ತಿಳಿಸಿವೆ.