ಜಿಲ್ಲೆ

ಮಾನವ ಕಳ್ಳಸಾಗಣೆ ತಡೆ ಜಾಗೃತಿ ಜಾಥಾ


ಕನಕಪುರ
ಕಾನೂನು ಸೇವಾ ಸಮಿತಿ ಹಾಗೂ ಗ್ರಾಮಾಂತರ ಪೋಲಿಸ್​ ಠಾಣೆ ಸಹಯೋಗದಲ್ಲಿ ತಾಲೂಕಿನ ವಿವಿಧೆಡೆ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಅಂಗವಾಗಿ ಭಾನುವಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ತಾಲೂಕಿನ ಚಿಕ್ಕಮುದವಾಡಿ ಮತ್ತು ಬೇಕುಪ್ಪೆ ಸರ್ಕಲ್​ಗಳಲ್ಲಿ ನಗರ ಹಾಗೂ ಗ್ರಾಮಾಂತರ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಸಬ್​ಇನ್​ಸ್ಪೆಕ್ಟರ್​ ಮನೋಹರ್​ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದ್ದ ಮಾನವ ಕಳ್ಳಸಾಗಣೆ ಣಿಸುತ್ತಿದೆ. ಆದರೂ ಮಹಿಳೆಯರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕು.

ಬಹು ದಿನಗಳ ಹಿಂದೆ ಬಡತನದಲ್ಲಿದ್ದ ಹೆಣ್ಣುಮಕ್ಕಳನ್ನು ಹಣದ ಆಮಿಷ ಒಡ್ಡಿ ಮೋಸ ಮಾಡಿ ಕರೆದುಕೊಂಡು ಹೋಗಿ ಮಾರಾಟ ಮಾಡಿದ ಪ್ರಕರಣಗಳು ಇದ್ದವು. ಇತ್ತೀಚೆಗೆ ಕಾನೂನು ತಿಳಿವಳಿಕೆಯಿಂದ ಇಂತಹ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿವೆ. ದೇಶದ ಪ್ರಜೆಗಳಿಗೆ ಅನೇಕ ಕಾನೂನು ಕಾಯ್ದೆಗಳಿದ್ದರೂ ಅವುಗಳ ಅರಿವು ಮೂಡಿಸುವುದು ಕರ್ತವ್ಯವಾಗಿದೆ ಎಂದರು.ಎಎಸ್​ಐ ಪದ್ಮಶಂಕರ್​, ಸಿಬ್ಬಂದಿ ಸುರೇಶ್​, ಪುನೀತ್​, ವಿನೋದ್​, ಮನು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.