ಜಿಲ್ಲೆ

ತೆನೆ ನಾಯಕರ ಪತ್ತೆ ಇಲ್ಲ ರಾಮನಗರದತ್ತ ಸುಳಿಯದ ಸೋಲುಂಡ ನಾಯಕರು ಕಾರ್ಯಕರ್ತರು ಅತಂತ್ರ

ಗಂಗಾಧರ್ ಬೈರಾಪಟ್ಟಣ

ರಾಮನಗರ: 19 ವರ್ಷಗಳಿಂದ ಪಕ್ಷದ ಪಾಲಿಗೆ ಶಕ್ತಿಯಾಗಿದ್ದ, ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅತಂತ್ರರಾಗಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ  ನಿಖಿಲ್ ಕುವಾರಸ್ವಾಮಿ ಅನಿರೀಕ್ಷಿತವಾಗಿ ಸೋಲು ಕಂಡರು. ಈ ಸೋಲು ಎಚ್.ಡಿ.ಕುವಾರಸ್ವಾಮಿ ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೂ ಇದರ ಪರಿಣಾಮವನ್ನು ರಾಮನಗರದಲ್ಜಿಲಿ ಜೆಡಿಎಸ್ ಕಾರ್ಯಕರ್ತರು ಎದುರಿಸುತ್ತಿದ್ದಾರೆ.

ಸೋಲಿನ ನಂತರ ಒಮ್ಮೆ ವಾತ್ರ ರಾಮನಗರಕ್ಕೆ ಬಂದು ಹೋದ ನಿಖಿಲ್ ಕುವಾರಸ್ವಾಮಿ ಮತ್ತೆ ಇತ್ತ ಸುಳಿದಿಲ್ಲ. ಈಗಾಗಲೇ ಸೋಲಿನ ಆಘಾತಕ್ಕೆ ಸಿಲುಕಿದ ಕಾರ್ಯಕರ್ತರು ಕುಗ್ಗಿದ್ದಾರೆ.

1994ರಲ್ಲಿ ರಾಮನಗರದಲ್ಲಿ ಆರಂಭಗೊಂಡ ಎಚ್.ಡಿ.ದೇವೇಗೌಡರ ಕುಟುಂಬದ ಪಾರುಪತ್ಯ ಅಂತ್ಯಗೊಂಡಿದ್ದು, 1996ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಅಂದಿನ ಜನತಾದಳದ ಅಭ್ಯರ್ಥಿ ಅಮರ್‌ನಾಥ್ ಅಲಿಯಾಸ್ ಅಂಬರೀಶ್ ಸೋಲು ಕಂಡಿದ್ದು ಬಿಟ್ಟರೆ, 2023ರ ಚುನಾವಣೆವರೆಗೂ ಜೆಡಿಎಸ್ ಎಂದೂ ತನ್ನ ಎದುರಾಳಿಗೆ ಗೆಲುವಿನ ಅವಕಾಶವನ್ನೇ ನೀಡಿರಲಿಲ್ಲ. ಇಲ್ಲಿ ದೇವೇಗೌಡರ ಕುಟುಂಬದ ಪ್ರಭಾವದ ಜತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅವಿರತ ಶ್ರಮ ಪ್ರಮುಖ ಕಾರಣವಾಗಿತ್ತು.

ಇಲ್ಲಿಂದಲೇ ದೇವೇಗೌಡರು ಆಯ್ಕೆಕೊಂಡು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಮಂತ್ರಿಯೂ ಆದರು. 2004ರಲ್ಲಿ ರಾಮನಗರದಿಂದ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಎಚ್.ಡಿ.ಕುವಾರಸ್ವಾಮಿ, ಮುಖ್ಯಮಂತ್ರಿಯೂ ಆದರು. 2018ರ ಉಪಚುನಾವಣೆಯಲ್ಲಿ ಅನಿತಾ ಕುವಾರಸ್ವಾಮಿ ಗೆಲುವು ಸಾಧಿಸಿ ರಾಜಕೀಯ ಪುನರ್ಜನ್ಮ ಪಡೆದರು. ದೇವೇಗೌಡರ ಕುಟುಂಬ ರಾಜ್ಯದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಜೆಡಿಎಸ್ ಕಾರ್ಯಕರ್ತರ ಶ್ರಮ ಇದೆ ಎಂದರೆ ತಪ್ಪಾಗಲಾರದು. ಆದರೆ ನಿಖಿಲ್ ಕುವಾರಸ್ವಾಮಿ ಅವರ ಸೋಲು ದೇವೇಗೌಡರ ಕುಟುಂಬಕ್ಕೆ ಆಘಾತ ನೀಡಿರುವಂತೆ ಕಾರ್ಯಕರ್ತರನ್ನು ಕುಗ್ಗಿಸಿದೆ.

ಕಳೆದುಕೊಂಡಲ್ಲೇ ಹುಡುಕುತ್ತಿಲ್ಲ: ರಾಜಕಾರಣದಲ್ಲಿ ಸೋಲು-ಗೆಲುವು ಸಾವಾನ್ಯ. ಸೋತಾಗ ನಾಯಕರು ಕುಗ್ಗಿದರೆ ಕಾರ್ಯಕರ್ತರು ಕುಸಿದು ಹೋಗುತ್ತಾರೆ. ಸದ್ಯಕ್ಕೆ ರಾಮನಗರದಲ್ಲಿ ಇದೇ ಪರಿಸ್ಥಿತಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಕುವಾರಸ್ವಾಮಿ ಅಲ್ಲಿಯೂ ಸೋಲು ಕಂಡಿದ್ದರು. ಸೋಲಿನ ನಂತರ ಮಂಡ್ಯ ಕ್ಷೇತ್ರಕ್ಕೆ ಹೆಚ್ಚು ಗಮನ ಕೊಡದೆ ಹೋದದ್ದು, ವಿಧಾನಸಭೆ ಚುನಾವಣೆಯಲ್ಲಿ ಪ್ರತಿಫಲಿಸಿತು. ಈಗ ರಾಮನಗರದಲ್ಲಿ ಸೋಲು ಕಂಡ ನಿಖಿಲ್ ಒಮ್ಮೆ ಬಂದು ಹೋಗಿದ್ದು ಬಿಟ್ಟರೆ ಇತ್ತ ಸುಳಿಯಲಿಲ್ಲ. ಎಲ್ಲಿ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆಯೋ ಅಲ್ಲಿಂದಲೇ ಅದನ್ನು ಮರಳಿ ಪಡೆಯುವ ಯತ್ನಕ್ಕೆ ಕೈ ಹಾಕಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಕ್ಷದ ಕಾರ್ಯಕರ್ತರು ದೂರಾಗುವುದು ಖಂಡಿತ.

ಚಾಮುಂಡಿ ಹಬ್ಬಕ್ಕೂ ಬರಲಿಲ್ಲ: ದೇವೇಗೌಡರ ಕುಟುಂಬಕ್ಕೆ ಮನೆದೇವರೇ ಆಗಿರುವ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಕುವಾರಸ್ವಾಮಿ ಮತ್ತು ನಿಖಿಲ್ ಗೈರು ಕಾರ್ಯಕರ್ತರಿಗೆ ಆಘಾತ ಉಂಟುವಾಡಿದೆ. ಅನಿತಾ ಕುಮಾರಸ್ವಾಮಿ ಅವರು ಬಂದು ಪೂಜೆ ವಾಡಿಸಿಕೊಂಡು ಹೋಗಿದ್ದಾರೆ. ಪ್ರತಿ ವರ್ಷ ಜೆಡಿಎಸ್ ವತಿಯಿಂದಲೇ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ಸೋಲು ಇದನ್ನೂ ಕಸಿದುಕೊಂಡಿತು. ಆದರೆ, ನಿಖಿಲ್ ಅಥವಾ ಕುವಾರಸ್ವಾಮಿ ಯಾರಾದರೂ ಒಬ್ಬರು ರಾಮನಗರಕ್ಕೆ ಬಂದು ಪೂಜೆ ಸಲ್ಲಿಸಿದ್ದರೆ ಮತ್ತಷ್ಟು ಚೈತನ್ಯ ತುಂಬುತ್ತಿತ್ತು ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ.

ಜೆಡಿಎಸ್ ಅಧ್ಯಕ್ಷ ಸ್ಥಾನ ಖಾಲಿ: ಜಿಲ್ಲೆಯಲ್ಲಿ ನಿಖಿಲ್ ಕುವಾರಸ್ವಾಮಿ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಟಕದ ಅಧ್ಯಕ್ಷ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ ಎರಡು ತಿಂಗಳಾಗಿದ್ದರೂ, ಈ ಸ್ಥಾನ ಭರ್ತಿಯಾಗಿಲ್ಲ. ಚನ್ನಪಟ್ಟಣಕ್ಕೆ ಕುವಾರಸ್ವಾಮಿ ಅವರು ಆಗಾಗ್ಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುತ್ತಾರೆ. ಸೋತ ನಂತರವೂ ವಾಗಡಿಯಿಂದ ಎ.ಮಂಜುನಾಥ್ ದೂರವಾಗಿಲ್ಲ. ರಾಮನಗರಕ್ಕೆ ತಾಲೂಕು ಟಕದ ಅಧ್ಯಕ್ಷರು ಇಲ್ಲದಿರುವುದು ಪಕ್ಷ ಸಂಟನೆಗೆ ಹಿನ್ನಡೆ ಉಂಟುವಾಡಿದೆ ಎನ್ನುವುದು ನಿಷ್ಠಾವಂತ ಕಾರ್ಯಕರ್ತರ ಮಾತಾಗಿದೆ.

ಕೈ ನತ್ತ ಕೆಲವರು 

ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಕಾರ್ಯಕರ್ತರ ರಾಜಕೀಯ ಭವಿಷ್ಯವನ್ನು ಅತಂತ್ರವಾಗಿಸಿದೆ. ನಾಯಕರು ಈಗ ದೂರವೇ ಉಳಿದಿರುವ ಕಾರಣ, ಭವಿಷ್ಯವನ್ನು ಅರಸುತ್ತಾ ಕೈ ನತ್ತ ಮುಖ ಮಾಡಿದ್ದಾರೆ. ಮುಂದೆ ಬರಲಿರುವ ತಾಪಂ, ಜಿಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕಾದರೆ ಸಂಘಟನೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ತಮಗೆ ಶಕ್ತಿ ತುಂಬುವ ಪಕ್ಷ ಬೇಕೆಂದು ಕೆಲವರು ಕೈ ಹಿಡಿಯುವ ತವಕದಲ್ಲಿದ್ದಾರೆ. ಆದರೆ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿರುವ ಕಾರ್ಯಕರ್ತರು ನಮ್ಮ ನಾಯಕರು ಇಂದಲ್ಲ ನಾಳೆ ಬರುತ್ತಾರೆ ಎನ್ನುವ ಆಸೆಗಣ್ಣಿನಿಂದಲೇ ಪಕ್ಷದಲ್ಲಿಯೇ ಮೌನವಾಗಿ ಉಳಿದುಕೊಂಡಿದ್ದಾರೆ.