ಜಿಲ್ಲೆ

4, 5ರಂದು ಬುಡಕಟ್ಟು ಜಾನಪದ ಲೋಕೋತ್ಸವ

ಗಂಗಾಧರ ಬಿ ವಿ
ರಾಮನಗರ
ರಾಜ್ಯದ ಯಾವುದೇ ಪ್ರದೇಶದಲ್ಲಿ ಕಾಣ ಸಿಗದ ಒಂದು ಹೊಸ ಬುಡಕಟ್ಟು ಲೋಕ ರಾಮನಗರದ ಜಾನಪದ ಲೋಕದಲ್ಲಿ ನಿರ್ವಾಣಗೊಂಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ ಹಿ.ಶಿ. ರಾಮಚಂದ್ರೇಗೌಡ ತಿಳಿಸಿದರು.
ಜಾನಪದ ಲೋಕದಲ್ಲಿ ವಾ.4ರ ಶನಿವಾರ ಮತ್ತು 5ರ ಭಾನುವಾರ ಹಮ್ಮಿಕೊಂಡಿರುವ ಬುಡಕಟ್ಟು ಜಾನಪದ ಲೋಕೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸದಾಗಿ ಜಾನಪದ ಲೋಕದಲ್ಲಿ ಬುಡಕಟ್ಟು ಜನರ ಆಚಾರ, ವಿಚಾರ, ವಾಸಿಸುವ ಮನೆ ಸೇರಿ ಅವರ ಜೀವನ ಶೈಲಿ ಸೂಚಿಸುವ ಸುಂದರ ಪರಿಸರದಲ್ಲಿ ಒಂದು ವಿಶಿಷ್ಟ ಹೊಸ ಪ್ರಯತ್ನದಲ್ಲಿ ಬುಡಕಟ್ಟು ಲೋಕ ನಿರ್ವಾಣಗೊಂಡಿದೆ. ಜತೆಗೆ ಗಂಗಾಧರೇಶ್ವರ ದೇವಾಲಯ, ಎರಗನಹಳ್ಳಿ ಅಮ್ಮ ಎಂಬ ಎರಡು ದೇವಾಲಯ, ಚಿತ್ರವನ, ಹೆಂಚಿನವನ ನಿರ್ವಾಣ ವಾಡಲಾಗಿದೆ. ವಿಡಿಯೋಸ್ಕೋಪಿ ಥಿಯೇಟರ್ ನವೀಕತಗೊಳಿಸಿದ್ದು ವಾ. 4ರ ಶನಿವಾರ ಲೋಕಾರ್ಪಣೆ ಗೊಳ್ಳುತ್ತಿವೆ ಎಂದು ತಿಳಿಸಿದರು.
ಈ ಬಾರಿಯ ಬುಡಕಟ್ಟು ಲೋಕೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಗಿರಿಜನ ಲೋಕ ಪ್ರಾರಂಭ, ಜಾನಪದ ಜಾದು ಮೋಡಿ, ಕೆಂಡ ಕೊಂಡೋತ್ಸವದ ಸತ್ಯಮಿತ್ಯ, ಇದೇ ಮೊದಲ ಬಾರಿಗೆ ಲೋಕ ಸರೋವರದಲ್ಲಿ ತೆಪ್ಪೋತ್ಸವ, ಜಾನಪದ ಲೋಕಕ್ಕೆ ಗ್ರಾಮದೇವತೆಯ ಆಗಮನ, ಗಂಗಾಧರೇಶ್ವರ ಸ್ವಾಮಿಯ ಸ್ಥಾಪನೆ, ಅತ್ಯದ್ಭುತ ಗಮನ ಸೆಳೆಯುವ ಗಿರಿಜನ ಲೋಕದ ಪ್ರಾರಂಭ, ನವೀಕರಣಗೊಂಡ ವಿಡಿಯೋ ಸ್ಕೋಪ್ ಥಿಯೇಟರ್‌ನ ಅನಾವರಣ, ಗೀತ ಗಾಯನೋತ್ಸವ ರಾಜ್ಯಹೊರ ರಾಜ್ಯದ ಜನಪದ ಕಲೆಗಳ ರಸದೌತಣ, ಬುಡಕಟ್ಟು ನತ್ಯೋತ್ಸವ, ವಿಚಾರ ಸಂಕಿರಣ, ರಾಜ್ಯದ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸವಾರಂಭ ನಡೆಯಲಿದೆ.
ರಾಜ್ಯದ ನಾನಾ ಭಾಗಗಳ ಕಲಾವಿದರಿಂದ ಡೊಳ್ಳು ಕುಣಿತ ವೀರಗಾಸೆ ಕುಣಿತ, ಕೀಲು ಕುದುರೆ, ಚಿಟ್‌ಮೇಳ, ಪಾಳೇಗಾರ ಹುಲಿವೇಷ, ಗೊರವರ ಕುಣಿತ, ಕಾಡುಗೊಲ್ಲರ ಕೋಲಾಟ, ಮಹಿಳಾ ವೀರಗಾಸೆ ನೀಲಗಾರರು, ಚಿಲಿಪಿಲಿ ಗೊಂಬೆ, ಪಟ ಕುಣಿತ ಸೇರಿ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ.
ಏನೇನು ಕಾರ್ಯಕ್ರಮ? 
ವಾ.4ರ ಶನಿವಾರ ಬೆಳಗ್ಗೆ ಬುಡಕಟ್ಟು ಲೋಕೋತ್ಸವ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ನೆರವೇರಿಸಲಿದ್ದಾರೆ. ಶಾಸಕಿ ಅನಿತಾ ಕುವಾರಸ್ವಾಮಿ ಅಧ್ಯಕ್ಷತೆ, ಕರಕುಶಲ ಮೇಳವನ್ನು ಪದ್ಮಶ್ರೀ ಮುನಿವೆಂಕಟಪ್ಪ  ಉದ್ಘಾಟಿಸಲಿದ್ದಾರೆ. ನಾಗೇಗೌಡ ಕಲಾ ಶಾಲೆ ವಿದ್ಯಾರ್ಥಿಗಳಿಂದ ಕಂಸಾಳೆ ನತ್ಯ, ಪಟ ಕುಣಿತ, ಗೇರ್‌ಕಳ್ಳ ನತ್ಯ, ಸೋಮನ ಕುಣಿತ ಸೇರಿದಂತೆ ಅಂತರಾಜ್ಯ ಕಲಾಪ್ರಕಾರಗಳು ನಡೆಯುತ್ತವೆ.
ಸಂಜೆ ಸರೋವರದಲ್ಲಿ ತೆಪ್ಪೋತ್ಸವ ನಡೆಯಲಿದ್ದು ನಾಗೇಗೌಡರ ಪುತ್ರಿ ಶಾಂತಮ್ಮ ಉದ್ಘಾಟಿಸಲಿದ್ದಾರೆ. ವಾ.5ರ ಭಾನುವಾರ ಬೆಳಗ್ಗೆ ಕರ್ನಾಟಕ ಜಾನಪದ ಅಧ್ಯಯನ ಕುರಿತು ವಿಚಾರ ಸಂಕಿರಣ ನಡೆಯಲಿದೆ. ನಾಡಿನ ಹೆಸರಾಂತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುವಾರ್ ಪ್ರಶಸ್ತಿ ಪ್ರದಾನ ವಾಡಲಿದ್ದಾರೆ. ಒಟ್ಟು 18 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಪ್ರೊ ಹಿ.ಶಿ. ರಾಮಚಂದ್ರೇಗೌಡ ತಿಳಿಸಿದರು.