ಜಿಲ್ಲೆ

ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಿದ್ಧಗೊಂಡ ರೇಷ್ಮೆ ನಗರಿ ಎಚ್ಡಿಕೆ ದಂಪತಿ ನೇತೃತ್ವದ ಕಾರ್ಯಕ್ರಮಕ್ಕೆ ಕ್ಷಣಗಣನೆ

ಗಂಗಾಧರ ಬಿ ವಿ

ರಾಮನಗರ : ಶ್ರೀನಿವಾಸ ಕಲ್ಯಾಣ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾ ಅವರ ಹುಟ್ಟುಹಬ್ಬ ಆಚರಣೆಗೆ ರೇಷ್ಮೆ ನಗರಿ ರಾಮನಗರ ಸಜ್ಜಗೊಂಡಿದೆ. ತಿರುಪತಿ ತಿಮ್ಮಪ್ಪನ ದೇವಾಲಯ ಮಾದರಿಯಲ್ಲೇ ವೇದಿಕೆ ಸಿದ್ದಗೊಂಡಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಪಂಚರತ್ನ ಯಾತ್ರೆಯ ಭಾಗವಾಗಿ ರಾಮನಗರಕ್ಕೆ ಬರುತ್ತಿರುವ ಮಾಜಿ ಸಿಎಂ ಎಚ್ ಡಿ.ಕೆ. ಅವರ ಹುಟ್ಟು ಹಬ್ಬವೂ ಶುಕ್ರವಾರವೇ ಆಗಿರುವ ಕಾರಣದಿಂದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ನೇರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

ಇದಕ್ಕಾಗಿ ಈಗಾಗಲೇ ಭವ್ಯ ಹಾಗೂ ತಿರುಪತಿ ತಿಮ್ಮಪ್ಪನ ದೇವಾಲಯದ ಪ್ರತಿಬಿಂಬದಂತೆ ವೇದಿಕೆ ಸಿದ್ದಗೊಂಡಿದ್ದು, ಗುರುವಾರ ಸಂಜೆ ವೇಳೆಗೆ ಬಹುತೇಕ ಎಲ್ಲಾ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಶ್ರೀನಿವಾಸ ಕಲ್ಯಾಣ ತಿರುಪತಿ ದೇವಾಲಯ ಪ್ರಧಾನ ಅರ್ಚಕರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ತಿರುಪತಿಯಲ್ಲಿನ ಶ್ರೀನಿವಾಸ ಹಾಗೂ ಪದ್ಮಾವತಿಯ ಮೂಲ ವಿಗ್ರಹಗಳು ಮಧ್ಯಾಹ್ನದ ವೇಳೆಗೆ ರಾಮನಗರಕ್ಕೆ ಬರಲಿದ್ದು, ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ನಗರದ ಪ್ರಮುಖ ಬೀದಿಗಳಲ್ಲಿ ವೈಭವಪೂರ್ಣ ಮೆರವಣಿಗೆ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ದಂಪತಿ, ಮಾಜಿ ಸಿಎಂ ಎಚ್.ಡಿ.ಕೆ ದಂಪತಿ, ಹಾಗೂ ನಿಖಿಲ್್ ದಂಪತಿ ನಿಖಿಲ್ ಕುಮಾರಸ್ವಾಮಿ ದಂಪತಿ ಭಾಗಿಯಾಲಿದ್ದಾರೆ.

ವೇದಿಕೆ ಮುಂಭಾಗ ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ 30ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವನ್ನು ಎಲ್ಲರೂ ಕಣ್ತುಂಬಿಕೊಳ್ಳಲು ಅವಕಾಶ ಆಗುವಂತೆ ಕ್ರೀಡಾಂಗಣದ ಎರಡು ಬದಿಯಲ್ಲಿ ಬೃಹತ್ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ನಂತರ ದರ್ಶನ ವ್ಯವಸ್ಥೆ ಕೂಡ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.

ಮಹಿಳೆಯರಿಗೆ ವಿಶೇಷವಾಗಿ ಭಾಗೀನ ನೀಡಲಾಗುತ್ತಿದ್ದು ಶಾಸಕಿ ಅನಿತಾಕುಮಾರಸ್ವಾಮಿ ಅದರ ಮೇಲ್ವೀಚಾರಣೆ ಹೊತ್ತಿದ್ದಾರೆ.

ಊಟದ ವ್ಯವಸ್ಥೆ : ಜಿಲ್ಲಾ ಕ್ರೀಡಾಂಗಣದ ಮೇಲ್ಬಾಗ ಬಂದ ಜನರಿಗೆ ಯಾವುದೇ ತೊಂದರೆ ಇಲ್ಲದಂತೆ ನೂಕು ನುಗ್ಗಲು ಇಲ್ಲದಂತೆ ಸುಮಾರು 20ಕ್ಕೂ ಹೆಚ್ಚಿನ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು "ಶೇಷವಾಗಿ ಹೋಳಿಗೆ, ಒಂದೆರಡು ತರ ಸಿ", ಅನ್ನ ಸಾಂಭಾರ್ ಊಟದ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗುವಂತೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.