ಜಿಲ್ಲೆ

ರಾಮ ಮಂದಿರ ನಾನೇ ಮಾಡಬೇಕು - ಎಚ್ಡಿಕೆ

ಗಂಗಾಧರ ಬಿ ವಿ
ಚನ್ನಪಟ್ಟಣ
ಚುನಾವಣಾ ಪೂರ್ವದಲ್ಲಿ ಮಂಡನೆಯಾಗಿರುವ ಈ ಬಜೆಟ್ ಗೆ ಯಾವುದೇ ರೀತಿಯ ಮಹತ್ವವಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮಾಡಿರುವ ಬಜೆಟ್ ಇದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಎಪಿಎಂಸಿ ಆವರಣದಲ್ಲಿ ನೂತನ ಗೋದಾಮು ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಏಪ್ರಿಲ್, ಮೇ ತಿಂಗಳಿನಲ್ಲಿ ಸಂಬಳ ಕೊಡಲು ಈ ಬಜೆಟ್ ಮಂಡನೆ ಮಾಡಲಾಗಿದೆ. ಅದ್ದರಿಂದ ಇಂದಿನ ಬಜೆಟ್ ಗೆ ನಾನು ಹೆಚ್ಚಿನ ಮಹತ್ವ ನೀಡಲ್ಲ. ಮುಂದೆ ಬರುವ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ ಬರಲಿದೆ. ಮುಂದೆ ಬರುವ ಸರ್ಕಾರ ಬಜೆಟ್ ನೀಡಲಿದೆ. ಮುಂದಿನ ಚುನಾವಣೆಯಲ್ಲಿ ಜನ ಯಾರಿಗೆ ಮತ ನೀಡುತ್ತಾರೆ ಅವರ ಬಜೆಟ್ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬರೋಲ್ಲ;
ನಾನು ಈಗಾಗಲೇ 70 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 30ರಿಂದ 40 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಲಕ್ಷಣವಿಲ್ಲ. ಮುಂದೆ ಚುನಾವಣೆ ಇರುವ ಕಾರಣ ಜನರನ್ನ ಮೆಚ್ಚಿಸಲು ಆದರೂ ಜನಪ್ರಿಯ ಘೋಷಣೆ ಮಾಡುತ್ತಾರೆ ಅನ್ನೊ ನಿರೀಕ್ಷೆ ಇತ್ತು.ಆದರೆ, ಅದು ಸುಳ್ಳಾಗಿದೆ. ಬಿಜೆಪಿಯಲ್ಲೇ ಬಜೆಟ್ ಬಗ್ಗೆ ನೀರಸ ಪ್ರತಿಕ್ರಿಯೆಯಿದೆ. ಈ ಬಗ್ಗೆ ವಿಧಾನಸೌಧದ ಮೊಗಶಾಲೆಯಲ್ಲಿ ಚರ್ಚೆ ನಡಿತಿದೆ. ಅಂತ ಮಾಹಿತಿ ಇದೆ. ಬಿಜೆಪಿ ಸಚಿವರು, ಶಾಸಕರಲ್ಲೇ ಬಜೆಟ್ ಬಗ್ಗೆ ಅಸಮಾಧಾನವಿದೆ ಎಂದರು.
ರಾಮಮಂದಿರ ನಾನೇ ಮಾಡಬೇಕು!
ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಮಮಂದಿರ ಅವರು ಘೋಷಣೆ ಮಾಡಿದ್ದರು ಅದನ್ನು ನಾನೇ ಮಾಡಬೇಕು. ಅವರ ಕೈಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ. ಮೂರು ವರ್ಷದ ಹಿಂದೆ ಮಂದಿರ ಕಟ್ಟಿದ್ದರೆ ಒಪ್ಪಿಕೊಳ್ಳಬಹುದಿತ್ತು.ಇನ್ನೂ, ಒಂದು ತಿಂಗಳಿನಲ್ಲಿ ಚುನಾವಣೆ ಘೋಷಣೆ ಆಗಲಿದೆ. ಹೀಗಾಗಿ, ರಾಮಮಂದಿರ ಘೋಷಣೆ ಬಜೆಟ್ ಬುಕ್ ನಲ್ಲೇ ಉಳಿಯಲಿದೆ. ರಾಮಮಂದಿರ ನಿರ್ಮಾಣ ಕಾರ್ಯ ಇವರಿಂದ ಆಗುವುದಿಲ್ಲ.ನನಗೆ ಗೊತ್ತಿದೆ ಮುಂದೆ ಯಾವ ಸರ್ಕಾರ ಬರಲಿದೆ ಎಂದು ಹೀಗಾಗಿ ರಾಮಮಂದಿರ ನಿರ್ಮಾಣ ನನ್ನಿಂದ ಸಾಧ್ಯ ಎನ್ನುವ ಮೂಲಕ ಮುಂದೆ ಅಧಿಕಾರ ಹಿಡಿಯುವ ಭರವಸೆ ವ್ಯಕ್ತಪಡಿಸಿದರು.