ಜಿಲ್ಲೆ

ರಾಮನಗರದಲ್ಲಿ ಇಂತವರನ್ನು ಓಡಾಡಲು ಬಿಟ್ಟಿದ್ದೆ ಕರ್ಮ - ಎಚ್ಡಿಕೆ

ರಾಮನಗರ:  ಈ ಹಿಂದೆ ರಾಮನಗರ ಹೇಗಿತ್ತು, ಈಗ ಹೇಗಿದೆ? ರಾಮನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು‌ ಯಾರು? ರಾಮನಗರ ದೇವೇಗೌಡರು ಕುಮಾರಸ್ವಾಮಿ ಬರುವ ಮುಂಚೆ ಹೇಗಿತ್ತು? ಅಂದು ರಾಮನಗರದಲ್ಲಿ ‌ಓಡಾಡಲು‌ ಆಗುತ್ತಿತೆ? ಇದುವರೆಗೆ ಯಾರಿಂದ ಅಭಿವೃದ್ಧಿ ‌ಕೆಲಸವಾಗಿದೆ? ಇವಾಗ ಅಭಿಯಾನ ಮಾಡುತ್ತಿರುವವರು ಬಂದು ಅಭಿವೃದ್ಧಿ ‌ಕೆಲಸಗಳನ್ನ ಮಾಡಿದ್ದರೆ ಎಂದು ಕುಟುಕಿದರು. ಇವತ್ತು ರಾಮನಗರ ಚನ್ನಪಟ್ಟಣಕ್ಕೆ 24ಗಂಟೆ ಕುಡಿಯುವ ನೀರು ಸೇರಿದಂತೆ ಹಲವು ಅಭಿವೃದ್ಧಿ ಮಾಡಿದ್ದೇವೆ. ಜೊತೆಗೆ ಇಡೀ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಸತ್ತೆಗಾಲ ನೀರಾವರಿ ಯೋಜನೆ ಜಾರಿಗೆ ತಂದದ್ದು ನಾನು. ಇಂದು ಇಂತಹ ವ್ಯಕ್ತಿಗಳನ್ನು ರಾಮನಗರದಲ್ಲಿ ಓಡಾಡಲು‌ ಬಿಟ್ಟಿದ್ದೇ ಕರ್ಮ ಎಂದು ರಾಮನಗರದಲ್ಲಿ ಕಾಂಗ್ರೆಸ್ ಮುಖಂಡರು ನಡೆಸಿದ ಇದೇನ್ ಕರ್ಮ ಅಭಿಯಾನಕ್ಕೆ ಎಚ್ ಡಿ ಕುಮಾರಸ್ವಾಮಿ ತೀಕ್ಷವಾಗಿ ಪ್ರತಿಕ್ರಿಯಿಸಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಇನ್ನು ರಾಮನಗರದ ದೊಡ್ಡಮಣ್ಣುಗುಡ್ಡೆ ಮನೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 58 ಕೋಟಿ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೊಡ್ಡಮಣ್ಣುಗುಡ್ಡೆ ಬಳಿ ನಿರ್ಮಾಣಕ್ಕೂ ತಕರಾರು ನಡೆಯುತ್ತಿದೆ. ಅಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಸಬಾರದು ಎಂದು ಕಾಂಗ್ರೆಸ್, ಬಿಜೆಪಿಯವರು ತಕರಾರು ಮಾಡುತ್ತಿದ್ದಾರೆ. 2006ರಲ್ಲಿ ಬಡವರಿಗೆ ಮನೆ ಕೊಡಲು 30 ಕೋಟಿ ನೀಡಿದ್ದೆ. ಆದರೆ, ಸರ್ಕಾರ ಹೋದ ನಂತರ, ಆ ಹಣ ಬೇರೆ ಕಡೆ ಡೈವರ್ಟ್ ಮಾಡಿಕೊಂಡು ಮನೆ ನಿರ್ಮಾಣ ಕಾರ್ಯಕ್ಕೆ ‌ಅಡ್ಡಿ ಮಾಡಿದರು.
ನಂತರ 2013ರಲ್ಲಿ ಕೋತ್ತಿಪುರದ ಬಳಿ ಭೂಮಿ ಗುರುತಿಸಲಾಯಿತು. ನಗರಸಭೆ ಭೂಮಿಯನ್ನು ಸುಪರ್ದಿಗೆ ಪಡೆದುಕೊಂಡಿತ್ತು. ಕಾಂಗ್ರೆಸ್ ನವರೇ ಭೂಮಿ ಕೊಡಿಸಿ, ಹಣವನ್ನು ಪಡೆದುಕೊಂಡರು‌, ಒಂದೇ ಗಂಟೆಯಲ್ಲಿ ಹಣವನ್ನು ಡ್ರಾ ಮಾಡಿಕೊಂಡರು. ನಾನು ಐದು ಸಾವಿರ ಕಟ್ಟಿದ್ದ ಬಡವರಿಗೆ ಮನೆ ಕೊಡಲು ಹೊರಟಿದ್ದೆ ಆದರೆ, ಕೋರ್ಟ್ ಗೆ ಹಾಕಿ ತಕರಾರು ತೆಗೆದರು. ಈಗ, ದೊಡ್ಡಮಣ್ಣುಗುಡ್ಡೆ ಬಳಿಯೂ ತಕರಾರು ಮಾಡಲು ಹೊರಟಿದ್ದಾರೆ. ಡಿಎಫ್ಓ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಕೆಲಸ ಮುಂದುವರಿದಂತೆ ಬೆದರಿಕೆ ಒಡ್ಡಿದ್ದಾರೆ. ಕಾಂಗ್ರೆಸ್, ಬಿಜೆಪಿಯವವರ‌ ಈ ಕುತಂತ್ರವನ್ನು ಜನ‌ ಅರ್ಥ ಮಾಡಿಕೊಳ್ಳಬೇಕು ಎಂದರು.