ಜಿಲ್ಲೆ

ಮಾದರಿ ಹಾರೋಹಳ್ಳಿ ನಿರ್ಮಾಣದ ಗುರಿ ಶಾಸಕ ಇಕ್ಬಾಲ್​ ಹುಸೇನ್​ ಭರವಸೆ ವಿವಿಧ ಕಾಮಗಾರಿಗಳ ವೀಕ್ಷಣೆ

ಹಾರೋಹಳ್ಳಿ (ರಾಮನಗರ)

ತಾಲೂಕು ಮತ್ತು ಪಟ್ಟಣವನ್ನು ಸಂಪೂರ್ಣವಾಗಿ ಅಭಿವೃಧ್ಧಿಗೊಳಿಸಿ ಮಾದರಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಇಕ್ಬಾಲ್​ ಹುಸೇನ್​ ಹೇಳಿದರು.

ಪಟ್ಟಣದ ವಿವಿಧೆಢೆ ಅಭಿವೃದ್ಧಿ ಕಾಮಗಾರಿಗಳನ್ನು  ವೀಕ್ಷಿಸಿ ಮಾತನಾಡಿದ ಅವರು, ವಿಶ್ವಾಸವಿಟ್ಟು ಗೆಲ್ಲಿಸಿರುವ ಜನತೆಯ ವಿಶ್ವಾಸ ಉಳಿಸಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.

ಹಾರೋಹಳ್ಳಿ ಕೇವಲ ಹೆಸರಿಗಷ್ಟೇ ತಾಲೂಕಾಗಿ ಘೋಷಣೆ ಮಾಡಿದ್ದು, ಯಾವುದೇ ಅಭಿವೃದ್ಧಿ ಕಂಡಿಲ್ಲ. 25 ವರ್ಷಗಳಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹಿಂದುಳಿದಿವೆ. ಸದ್ಯ ಕಾಮಗಾರಿಗಳ ವೀಕ್ಷೆ ಮಾಡುತ್ತಿದ್ದೇನೆ. ತಾಲೂಕಿನಲ್ಲಿನ ಸಮಸ್ಯೆಗಳನ್ನು ಪತ್ತೆಹಚ್ಚಿ ಬಗೆಹರಿಸುವ ಕೆಲಸ ಮಾಡಲಾಗುವುದು. ಮೊದಲು ಜನರಿಗೆ ಮೂಲಸೌಲಭ್ಯ ಒದಗಿಸಲು ಗಮನ ಹರಿಸಲಾಗುವುದು ಎಂದರು.

ದ್ವೇಷದ ರಾಜಕಾರಣ ಮಾಡಲ್ಲ

ಕಾಮಗಾರಿ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಕ್ಬಾಲ್​ ಹುಸೇನ್​, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ನಾವು ತಡೆದಿಲ್ಲ, ಸರ್ಕಾರ ತಡೆಹಿಡಿದಿದ್ದು ಅದರಲ್ಲಿ ನಮ್ಮ ಪಾತ್ರವಿಲ್ಲ. ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ, ಉಳಿದ ಸಮಯದಲ್ಲಿ ಜನಸೇವೆ ಅಷ್ಟೇ. ಅಭಿವೃಧ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಲ್ಲ ಎಂದರು.

ವಿವಿಧ ಕಾಮಗಾರಿ ವೀಕ್ಷಣೆ

ಹಾರೋಹಳ್ಳಿಯ ವಿವಿಧೆಡೆ ಸಂಚರಿಸಿದ ಶಾಸಕ ಇಕ್ಬಾಲ್​ ಹುಸೇನ್​, ಕುಡಿಯುವ ನೀರು, ಚರಂಡಿ, ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ ವೀಸಿದರು. ಜತೆಗೆ ಜನರ ಕುಂದುಕೊರತೆ ಆಲಿಸಿ ಅಧಿಕಾರಿಗಳಿಗೆ ಆಗಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡಿದರು. ಅಲ್ಲೆ ಇದ್ದ ಅಂಗವಿಕಲನೊಬ್ಬನಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿ ವೈಯಕ್ತಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.

ತಹಸೀಲ್ದಾರ್​ ವಿಜಿಯಣ್ಣ, ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ನಟರಾಜು, ಬಮುಲ್​ ನಿರ್ದೇಶಕ ಎಚ್​.ಎಸ್​. ಹರೀಶ್​ ಕುಮಾರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಅಶೋಕ್​, ಮುಖಂಡರಾದ ಎಚ್​.ಸಿ. ಶೇಖರ್​, ಸೋಮಶೇಖರ್​, ಮೋಹನ್​ ಹೊಳ್ಳ, ಶಿಲ್ಪಾ ಶಿವಾನಂದ, ಪುಟ್ಟಮಣಿ ಪುಟ್ಟಸ್ವಾಮಿ, ರುದ್ರೇಶ್​, ಕೋಟೆ ಪ್ರಕಾಶ್​, ನಯಾಮತ್​, ಬಾಲಾಜಿ ಮುಂತಾದವರು ಹಾಜರಿದ್ದರು.