ಹಾರೋಹಳ್ಳಿ (ರಾಮನಗರ)
ವೃದ್ಧೆ ನಿಧನರಾಗುವ ಏಳೆೆಂಟು ತಿಂಗಳ ಮೊದಲೇ ಆಕೆಯ ಮರಣ ಪ್ರಮಾಣಪತ್ರ ವಿತರಣೆಯಾಗಿತ್ತೆಂಬ ಸಂಗತಿ ಬೆಳಕಿಗೆ ಬಂದಿದೆ.
ಹಾರೋಹಳ್ಳಿಯ ಅಡೆ ಬೀದಿಯ ನಿವಾಸಿ ಎಚ್.ಆರ್. ರುದ್ರಮ್ಮ(70) 2023ರ ಫೆ.18ರಂದು ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅಂತಿಮ ವಿಧಿವಿಧಾನದ ನಂತರ ಅವರ ಕುಟುಂಬಸ್ಥರು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ 2022ರ ಜೂನ್ನಲ್ಲೇ ರುದ್ರಮ್ಮ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ವಿತರಣೆಯಾಗಿರುವುದು ಆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗಲೇ ಹೇಗೆ, ಯಾವ ಕಾರಣಕ್ಕಾಗಿ ಮರಣ ಪ್ರಮಾಣ ಪತ್ರ ನೀಡಿದರು ಅಥವಾ ಪಡೆದರು ಎನ್ನುವುದು ಇದೀಗ ಯ ಪ್ರಶ್ನೆಯಾಗಿದೆ. ಹಾರೋಹಳ್ಳಿ ವೃತ್ತ ಗ್ರಾಮ ಲೆಕ್ಕಾಧಿಕಾರಿ ಹೆಸರಿನಲ್ಲಿ ಈ ಪ್ರಮಾಣ ಪತ್ರ ನೀಡಲಾಗಿರುವ ವಿವರ ಕೇಳಿ ಕುಟುಂಬಸ್ಥರು ದಂಗಾಗಿದ್ದಾರೆ. ಮರಣ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬದವರು ಒತ್ತಾಯಿಸಿದ್ದಾರೆ.
ಇದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಕ್ಷಣವೇ ಪರಿಶೀಲಿಸಲಾಗುವುದು. ತಪ್ಪು ಕಂಡುಬಂದರೆ ಮರಣ ಪ್ರಮಾಣ ಪತ್ರ ವಿತರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ವಿಜಯಣ್ಣ, ತಹಸೀಲ್ದಾರ್, ಹಾರೋಹಳ್ಳಿ
.