ಜಿಲ್ಲೆ

ದಾಖಲೆ ಇಲ್ಲದ ಹಣ ವಶಕ್ಕೆ ಪಡೆದ ಹಾರೋಹಳ್ಳಿ ಪೊಲೀಸರು

ಗಂಗಾಧರ ಬಿ ವಿ

ಹಾರೋಹಳ್ಳಿ (ರಾಮನಗರ):

ಯಾವುದೇ ದಾಖಲೆಯಿಲ್ಲದೇ ೨ಲಕ್ಷ ಹಣವನ್ನು ಸಾಗಿಸುತ್ತಿದ್ದವರನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಹಾರೋಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಹಾರೋಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ತಟ್ಟೆಕೆರೆ ಬಳಿಯ ಚುನಾವಣಾ ಚೆಕ್‌ಪೋಸ್ಟ್ ನಲ್ಲಿ ಜಿಗಣಿ ಕಡೆಯಿಂದ ಶಿವಣ್ಣ ಎಂಬ ವ್ಯಕ್ತಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದ ೨ ಲಕ್ಷ ಹಣವನ್ನು ತರುತ್ತಿದ್ದರು ಈ ವೇಳೆ ಚಿಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂಧಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಹಾರೋಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಹಸೀಲ್ದಾರ್ ವಿಜಿಯಣ್ಣ ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.