ಜಿಲ್ಲೆ

ಕೊಂಡಕ್ಕೆ ಮುನ್ನವೇ ಕುಸಿದು ಅರ್ಚಕ ಸಾವು

ಗಂಗಾಧರ ಬಿ ವಿ
ಹಾರೋಹಳ್ಳಿ (ರಾಮನಗರ)
     ಅಗ್ನಿಕೊಂಡ ನೆರವೇರುವ ಮುನ್ನವೇ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ನಡೆದಿದೆ. ಮಾವತ್ತೂರು ಗ್ರಾಮದ ಮಾವತ್ತೂರಮ್ಮ ದೇವಿಯ ಅರ್ಚಕ ನಾಗರಾಜು ಮೃತ ವ್ಯಕ್ತಿ
    ಸೋಮವಾರ ಮಾವತ್ತೂರಮ್ಮ ದೇವಿಯ ಅಗ್ನಿಕೊಂಡೋತ್ಸವದ ಅಂಗವಾಗಿ ಬೆಳಿಗ್ಗೆ ಗ್ರಾಮದಲ್ಲಿ ಅಗ್ನಿಕೊಂಡೋತ್ಸವಕ್ಕೆ ಮೆರವಣಿಗೆ ಮೂಲಕ ದೇವರನ್ನು ಕರೆ ತರುವಾಗ ಮಹಿಳೆ ಒಬ್ಬರು ವಿಚಿತ್ರವಾಗಿ ಕುಣಿಯಲಾರಂಭಿಸಿದ್ದರು. ಆಗ ಅರ್ಚಕ ನಾಗರಾಜು ಆ ಮಹಿಳೆಗೆ ಬೆತ್ತದಿಂದ ಹೊಡೆಯುತ್ತಿದ್ದಂತೆ ಮಹಿಳೆ ಅರ್ಚಕರ ಕಾಲಿಗೆ ಬಿದ್ದಿದ್ದಾಳೆ ಈ ವೇಳೆ ಅರ್ಚಕ ನಾಗರಾಜು ಕುಸಿದು ಕೆಳಗೆ ಬಿದ್ದಿದ್ದಾರೆ ತಕ್ಷಣ ಅರ್ಚಕರನ್ನು ಆಸ್ಪತ್ರೆಗ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.