ಜಿಲ್ಲೆ

ಶ್ರೀಗಂಧ ಕಳ್ಳರ ಬಂದಿಸಿದ ಅರಣ್ಯ ಇಲಾಖೆ

ಗಂಗಾಧರ ಬಿ ವಿ

ರಾಮನಗರ : ನಗರದ ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಶುಕ್ರವಾರ ಶ್ರೀಗಂಧ ತುಂಡು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ರಾಮನಗರ ಅರಣ್ಯ ಇಲಾಖೆ ಸಿಬ್ಬಂದಿಸಿದ್ದಾರೆ.


ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸೇಗೌಡನದೊಡ್ಡಿ ಬಳಿಯ ಇರುಳಿಗರದೊಡ್ಡಿ ಗ್ರಾಮದ ವಾಸಿ ಹುಲಿಯೂರಯ್ಯ (45) ಬಂಧಿತ ವ್ಯಕ್ತಿ.


ಶುಕ್ರವಾರ ಇರುಳಿಗರದೊಡ್ಡಿ ಗ್ರಾಮದಿಂದ ಹೀರೋಹೊಂಡಾ ಬೈಕಿನಲ್ಲಿ ಹಸಿ ಶ್ರೀಗಂಧ ತುಂಡುಗಳನ್ನು ಎರಡು ಬ್ಯಾಗುಗಳಲ್ಲಿ ತುಂಬಿಕೊಂದು ಬರಬೇಕಾದರೆ ರಾಮನಗರದ ರೈಲ್ವೆ ನಿಲ್ದಾಣದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಶ್ರೀಗಂಧದ ತುಂಡುಗಳನ್ನು ಮಾರಲು ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.


ಈ ವೇಳೆ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಕೆ. ರಾಜು ನೇತೃತ್ವದ ಎರಡು ತಂಡ ಈತನಿಗೆ ಬಲೆ ಬೀಸಿದ್ದರು. ಅರಣ್ಯ ಇಲಾಖೆ ಸುತ್ತಲೂ ನಾಕಾಬಂಧಿ ವ್ಯವಸ್ಥೆ ಮಾಡಿ ಮಾಲು ಸಮೇತವಾಗಿ ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತನಿಂದ ಒಂದು ಬೈಕ್, 12 ಕೆಜಿ ತೂಕದ ಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ. ರಾಜು, ಬೈರವ, ವಾಸು, ಕುಮಾರ್, ಮಿಥುನ್, ಅರಣ್ಯ ರಕ್ಷಕರಾದ ಶ್ರೀನಿವಾಸ್, ಶಾಂತಕುಮಾರ್, ರವಿಕುಮಾರ್, ನಾರಾಯಣ್, ಪ್ರಕಾಶ್ ಮುಂತಾದವರಿದ್ದರು.