ಕೈಲಾಂಚ(ರಾಮನಗರ): ಹೋಬಳಿಯ ಚನ್ನಮಾನಹಳ್ಳಿ-ಚಿಕ್ಕೇನಹಳ್ಳಿ ಗ್ರಾಮದಲ್ಲಿ ಮೂರು ಆನೆಗಳ ಹಿಂಡು ದಾಳಿ ನಡೆಸಿ ರೈತರ ತೆಂಗಿ ನಗಿಡಗಳನ್ನು ಅಪಾರ ಪ್ರಮಾಣದಲ್ಲಿ ನಾಶ ಪಡಿಸಿವೆ.
ಕಾವೇರಿ ವನ್ಯಜೀವಿಧಾಮದಿಂದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಬಂದಿರುವ ಆನೆಗಳ ಹಿಂಡು ಸೋಮವಾರ ರಾತ್ರಿ ಅರಣ್ಯದಿಂದ ಹೊರಬಂದು ಅಚ್ಚಲು ಅರಣ್ಯ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿ ಚಿಕ್ಕೇನಹಳ್ಳಿ ಗ್ರಾಮದ ಎಂ. ಅಶೋಕ, ಎಂ. ಕುಮಾರ್, ಚನ್ನಮಾನಹಳ್ಳಿ ಗ್ರಾಮದ ಮಲ್ಲೇಶ್ ಎಂಬುವರಿಗೆ ಸೇರಿದ ತೆಂಗಿನ ತೋಟಕ್ಕೆ ನುಗ್ಗಿ ತೆಂಗಿನಗಿಡಗಳನ್ನು ಕಿತ್ತು ನಾಶಪಡಿಸಿವೆ.
ಜೊತೆಗೆ ಬಾಳೆಗಿಡ ಮುಸುಕಿನ ಜೋಳ, ಮಾವು, ಮಾವಿನ ಫಸಲು ನಾಶಪಡಿಸಿವೆ. ಆನೆಗಳ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಗಿಡಗಳು ನಾಶವಾಗಿವೆ ಜೊತೆಗೆ ಬಾಳೆ ತೋಟ ನಾಶವಾಗಿದೆ. ಆನೆಗಳು ಈ ಭಾಗಕ್ಕೆ ಬರುತ್ತಿರಲಿಲ್ಲ ಈಗ ಬರುವುದನ್ನು ರೂಡಿ ಮಾಡಿಕೊಂಡಿವೆ. ಕೂಡಲೇ ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಫಸಲು ನಷ್ಟಕ್ಕೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಚನ್ನಮಾನಹಳ್ಳಿ ಗ್ರಾಮದ ರೈತ ಮಲ್ಲೇಶ್ ಆಗ್ರಹಿಸಿದ್ದಾರೆ.
ಹಂದಿಗೊಂದಿ ಅರಣ್ಯದಲ್ಲಿದ್ದ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆಕಾರ್ಯಾಚರಣೆ ಮೂಲಕ ತೆಂಗಿನಕಲ್ಲು ಅರಣ್ಯಕ್ಕೆ ಸೇರಿಸುವ ಸಮಯದಲ್ಲಿ ಅಚ್ಚಲು ಅರಣ್ಯದ ಕಡೆ ಬಂದಿವೆ ಇಂದೇ ಅವುಗಳು ಇರುವ ಜಾಗ ಪತ್ತೆ ಹಚ್ಚಿ ಸ್ವಸ್ಥಾನಕ್ಕೆ ಕಳುಹಿಸುವ ನಿಟ್ಟಿನಲ್ಲಿ ಕಡೆಕಾರ್ಯಾಚರಣೆ ನಡೆಸಲಾಗುತ್ತದೆ.
ದಿನೇಶ್, ವಲಯ ಅರಣ್ಯಾಧಿಕಾರಿ, ರಾಮನಗರ.