ಚನ್ನಪಟ್ಟಣ
ಪ್ರಸುತ್ತ ದುಬಾರಿ ಬೆಲೆಯಿಂದ ಗ್ರಾಹಕರ ಜೇಜಿಗೆ ಭಾರ ಎನಿಸಿರುವ ಟೊಮೆಟೋ ಹಣ್ಣನ್ನು ತುಂಬಿಕೊಂಡು ಹೋಗುತ್ತಿದ್ದ ಸರಕು ಸಾಗಾಣಿಕಾ ವಾಹನವೊಂದು ನೂತನ ಎಕ್ಸ್‌ಪ್ರೆಸ್ ಹೈವೇಯಲ್ಲಿ ಪಲ್ಟಿ ಹೊಡೆದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆಟೊಮೆಟೋ ತುಂಬಿಕೊಂಡು ಸಂಚರಿಸುತ್ತಿದ್ದ ಲಾರಿ ತಾಲೂಕಿನ ಸಂಗಲಗೆರೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ಹಿನ್ನೆಲೆಯಲ್ಲಿಟೊಮೆಟೋ ರಸ್ತೆಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿದೆ.
ಘಟನೆಯಲ್ಲಿ ಚಾಲಕ ಮತ್ತು ಕ್ಲಿನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಆ ಸಮಯದಲ್ಲಿ ಬೇರೆ ವಾಹನಗಳು ರಸ್ತೆಯಲ್ಲಿ ಬಾರದ ಕಾರಣ ಹೆಚ್ಚಿನ ಆನಾಹುತ ಸಂಭವಿಸಿಲ್ಲ. ಸರಿ ರಾತ್ರಿಯಲ್ಲಿ ರಸ್ತೆಯಲ್ಲಿ ಚೆಲ್ಲಾಡಿದ ಟೊಮೆಟೋವನ್ನು ಕಂಡ ಸಾರ್ವಜನಿಕರು, ಹೆದ್ದಾರಿ ಪ್ರಯಾಣಿಕರು ಟೊಮೆಟೋವನ್ನು ಮತ್ತೊಂದು ವಾಹನಕ್ಕೆ ತುಂಬಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.