ಜಿಲ್ಲೆ

ಬಸ್ ನಿಲ್ದಾಣದಲ್ಲಿ ಸಾಲದ ಹಣ ಕಳೆದುಕೊಂಡ ವೃದ್ಧೆ

ಚನ್ನಪಟ್ಟಣ: ವೃದ್ಧೆಯೊಬ್ಬರ ಬ್ಯಾಗ್‌ನಲ್ಲಿದ್ದ 49599 ರೂ. ಹಣವನ್ನು ಕಳುವ ಮಾಡಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ‌ ನಡೆದಿದೆ.


ತಾಲೂಕಿನ ಗಂಗೆದೊಡ್ಡಿ ಗ್ರಾಮದ ಸಣ್ಣಮ್ಮ(60) ಹಣ ಕಳೆದುಕೊಂಡ ವೃದ್ಧೆ. ಇವರಿಗೆ ಕಾವೇರಿ ಸಂಘದಿಂದ ಲೋನ್ 1 ಲಕ್ಷ ರೂ. ಮಂಜೂರಾಗಿದ್ದು, ಲೋನ್ ಹಣ ಎಸ್‌ಬಿಐ ಖಾತೆಗೆ ಬಂದಿದೆ.

ತಮ್ಮ ಮೊಮ್ಮಗಳಾದ ಪೂಜಾ ಜತಗೆ ನಗರಕ್ಕೆ ಬಂದ ವೃದ್ಧೆ ಬ್ಯಾಂಕ್‌ನಿಂದ 49500 ರೂ. ಹಣವನ್ನು ಡ್ರಾ ಮಾಡಿಕೊಂಡು ಗ್ರಾಮಕ್ಕೆ ಹಿಂದಿರುಗಲು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿದ್ದಾರೆ.

ಟಿಕೆಟ್‌ಗೆ ಆಧಾರ್‌ಕಾರ್ಡ್ ತೋರಿಸಲು ಬ್ಯಾಗ್ ತೆರೆದಾಗ ಬ್ಯಾಗ್‌ನಲ್ಲಿದ್ದ ಹಣ ಕಳುವಾಗಿರುವುದು ಕಂಡುಬಂದಿದೆ.
ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.