ಜಿಲ್ಲೆ

ಮೆಡಿಕಲ್ ಶಾಪ್ ದೋಚಿದ ಕಳ್ಳರು

ಗಂಗಾಧರ ಬಿ ವಿ

ಚನ್ನಪಟ್ಟಣ: 

ಮೆಡಿಕಲ್ ಸ್ಟೋರ್ ಶೆಟರ್ ಬೀಗ ಒಡೆದು ಅಂಗಡಿಯಲ್ಲಿದ್ದ ಪದಾರ್ಥಗಳನ್ನು ಕಳವು ಮಾಡಿರುವ ಘಟನೆ ನಗರದ ಸಾತನೂರು ರಸ್ತೆಯಲ್ಲಿ ನಡೆದಿದೆ.


ಶಾ ಅಜಮುದ್ಧೀನ್ ಎಂಬುವವರು ನಗರದ ಸಾತನೂರು ರಸ್ತೆಯಲ್ಲಿನ ವಾಟರ್ ಟ್ಯಾಂಕ್ ಬಳಿ ಎಸ್.ಎನ್. ಮೆಡಿಕಲ್ ಷಾಪ್ ಹಾಗೂ ಜನರಲ್ ಸ್ಟೋರ್ ಇಟ್ಟುಕೊಂಡಿದ್ದು, ಬುಧವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದಾರೆ.

ಗುರುವಾರ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಶೆಟರ್‌ನ ಬೀಗ ಒಡೆದಿದ್ದು, ಅಂಗಡಿಯಲ್ಲಿದ್ದ ಹಾರ್ಲಿಕ್ಸ್ ಡಬ್ಬ, ಪರ್ಫೂಂ ಬಾಟಲ್‌ಗಳು, ಸೋಪು, ಟೂಟ್‌ಪೇಸ್ಟ್ ಸೇರಿದಂತೆ ತಿಂಡಿ ಪದಾರ್ಥಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ.
ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.