ಜಿಲ್ಲೆ

ಅಪಘಾತ ಅಪರಿಚಿತ ವ್ಯಕ್ತಿ ಸಾವು

ಚನ್ನಪಟ್ಟಣ: ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿಯ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಬೈರಾಪಟ್ಟಣ ಗ್ರಾಮದಲ್ಲಿರುವ ಬಮುಲ್ ಶಿಥಲೀಕರಣ ಕೇಂದ್ರ ಮುಂಭಾಗ ಈ ಘಟನೆ ನಡೆದಿದೆ. ಹೈವೇಯನ್ನು ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ವೇಳೆ ನಿಯಂತ್ರಣ ತಪ್ಪಿದ ಕಾರು ಸಹ ಅಪಘಾತಕ್ಕೆ ಈಡಾಗಿದೆ. ಸ್ಥಳಕ್ಕೆ ಹೈವೇ ಪೊಲೀಸ್ ಹಾಗೂ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

ನೂತನ ಹೈವೇಯ ಹಲವೆಡೆ ತಡೆಬೇಲಿ ಇಲ್ಲವಾಗಿದ್ದು, ಇದು ಪಾದಚಾರಿಗಳು ರಸ್ತೆ ದಾಟಲು ಅವಕಾಶ ನೀಡದಂತಾಗಿದೆ. ಈ ಅಪಘಾತಕ್ಕೂ ಇದೇ ಕಾರಣ ಎನ್ನಲಾಗಿದೆ.