ರಾಮನಗರ : ನಗರದ ಐತಿಹಾಸಿಕ ಚಾಮುಂಡೇಶ್ವರಿ ದೇವರ ಕರಗ ಅಗ್ನಿಕೊಂಡ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆದು ರಾಮನಗರದ ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ತೆರೆಬಿತ್ತು.
ಕಳೆದ 20 ವರ್ಷಗಳಿಂದ ಚಾಮುಂಡೇಶ್ವರಿ ಕರಗದ ದಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ರಸಮಂಜರಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸುವುದರಿಂದ ಲಕ್ಷಾಂತರ ಜನರು ಭಾಗವಹಿಸುವ ಕಾರಣ ರಾಮನಗರದ ಚಾಮುಂಡೆಶ್ವರಿ ಕರಗ ಮಹೋತ್ಸವಕ್ಕೆ ಮತ್ತಷ್ಟು ಮೆರಗು ತಂದಿದೆ.
ಮಂಗಳವಾರ ರಾತ್ರಿ ಚಾಮುಂಡೇಶ್ವರಿ ದೇವರ ಕರಗ ಮಹೋತ್ಸವ ಜೊತೆಗೆ ಶಕ್ತಿ ದೇವತೆಗಳಾದ ನಗರದ ತೋಪ್‌ಖಾನ್ ಮೊಹಲ್ಲಾ ಮುತ್ತು ಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಶೆಟ್ಟಿಹಳ್ಳಿಬೀದಿ ಆದಿಶಕ್ತಿ ಅಮ್ಮ, ಐಜೂರು ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಅಮ್ಮನವರ ಕರಗ ಮಹೋತ್ಸವಗಳು ನಡೆದವು.
ಪ್ರಮುಖವಾಗಿ ಚಾಮುಂಡೇಶ್ವರಿ ಕರಗ ನಗರದ ಎಂ.ಜಿ. ರಸ್ತೆ, ಐಜೂರು, ಮಂಡೀಪೇಟೆ, ಬಾಲಗೇರಿ, ಗಾಂದೀನಗರ, ಚಾಮುಂಡೀಪುರ, ರಾಯರದೊಡ್ಡಿ ಸರ್ಕಲ್, "ವೇಕಾನಂದನಗರ, "ನಾಯಕನಗರ, "ಜಯನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಕರಗ ಸಂಚರಿಸಿತು. ಬುಧವಾರ ಬೆಳಿಗ್ಗೆ ಕರಗ ಮೆರವಣಿಗೆ ನಂತರ ದೇವಾಲಯಕ್ಕೆ ಬಂದು ಕರಗಹೊತ್ತ ದೇವಿಪ್ರಸಾದ್ ಸಿಂಗ್ ಬಾಬು 23 ನೇ ಭಾರಿ ಕರಗಧಾರಕರಾಗಿ ಸಾವಿರಾರು ಜನರ ಜೈಕಾರದೊಡನೆ 12 ಹೆಜ್ಜೆಗಳಲ್ಲಿ ಅಗ್ನಿಕೊಂಡ ಹಾಯ್ದರು.
ದೇವಾಲಯ ಸುತ್ತಮುತ್ತಲ ಕಟ್ಟಡಗಳ ಮೇಲೆ ಜನರು ನಿಂತು ಕರಗಕ್ಕೆ ಹೂಮಳೆ ಸುರಿಸಿ ಜೈ ಚಾಮುಂಡೇಶ್ವರಿ ಎಂದು ಹೇಳುತ್ತಾ ಅಗ್ನಿಕೊಂಡ ಮಹೋತ್ಸವ ಕರಗ ಮಹೋತ್ಸವನ್ನು ಕಂಡು ಕಣ್ತುಂಬಿಕೊಂಡರು. ಕಾಮಣ್ಣನಗುಡಿ ಸರ್ಕಲ್ ನಿಂದ ದೇವಾಲಯದವರೆಗೆ ಜನಜಂಗುಳಿ ಇತ್ತು.
ಐಜೂರು ಆದಿಶಕ್ತಿ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ ದೇವರ ಅಗ್ನಿಕೊಂಡ ನಡೆದರೆ ಭಂಡಾರಮ್ಮ, ತೋಪ್‌ಖಾನ್ ಮೊಹಲ್ಲಾ ಮುತ್ತು ಮಾರಮ್ಮ, ಶೆಟ್ಟಿಹಳ್ಳಿಬೀದಿ ಆದಿಶಕ್ತಿ ಕೊಂಕಾಣಿದೊಡ್ಡಿ ಆದಿಶಕ್ತಿ ದೇವರುಗಳ ಕರಗ ಮಹೋತ್ಸವ ನಡೆುತು.
ರಾಮನಗರ ನಗರ, ಐಜೂರು, ಸಂಚಾರ ಪೋಲೀಸರು ಸೂಕ್ತ ಪೋಲೀಸ್ ಭದ್ರತೆ ಒದಗಿಸಿದ್ದರು.