ಗಂಗಾಧರ್ ಬೈರಾಪಟ್ಟಣ ರಾಮನಗರ
ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ರಾಮನಗರ ಜಿಲ್ಲೆ ಈ ಬಾರಿ ನಿರೀಕ್ಷೆಯ ಮೂಟೆ ಹೊತ್ತು ಕಾಯುತ್ತಿದೆ. ೆ.17ರಂದು ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಜಿಲ್ಲೆಗೆ ಏನೆಲ್ಲಾ ಉಡುಗೊರೆಗಳನ್ನು ನೀಡಬಹುದು ಎನ್ನುವ ಲೆಕ್ಕಾಚಾರ ಆರಂಭಗೊಂಡಿದೆ.
ಕಾರ್ಯರೂಪಕ್ಕೆ ಬರಲಿಲ್ಲ: ಜಿಲ್ಲೆಯಾಗಿ 15 ವಸಂತಗಳನ್ನು ಪೂರೈಸಿರುವ ಜಿಲ್ಲೆಗೆ 17 ವರ್ಷಗಳಿಂದಲೂ ಬಜೆಟ್‌ನಲ್ಲಿ ೋಷಣೆ ಆದ ಅದೆಷ್ಟೋ ಯೋಜನೆಗಳು ಕೇವಲ ಕಡತದಲ್ಲಿ ಮಾತ್ರ ಸೀಮಿತವಾಗಿವೆ. ಈ ಹಿಂದೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಿಂದ ಮೊದಲ್ಗೊಂಡು ಮೇಕೆದಾಟು ಯೋಜನೆವರೆಗೂ ಸಾಕಷ್ಟು ಮಹತ್ವವಾದ ಯೋಜನೆಗಳನ್ನು ಬಜೆಟ್‌ನಲ್ಲಿ ೋಷಣೆ ಮಾಡಿದ್ದರು. ಕಾರ್ಯರೂಪಕ್ಕೆ ಬಂದಿದ್ದು ಮಾತ್ರ ಕೆಲವೇ ಕೆಲವು.
ಮೇಕೆದಾಟು ಯೋಜನೆಗೆ ಕಳೆದ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ.ಅನುದಾನ ಮೀಸಲಿಟ್ಟಿದ್ದರು. ಇದು ಕಾರ್ಯರೂಪಕ್ಕೆ ಬರಲಿಲ್ಲ. ಆರೋಗ್ಯ ವಿವಿ ಆರಂಭಕ್ಕೆ ಸಂಪುಟದಲ್ಲಿ 600 ಕೋಟಿ ರೂ.ಅನುಮೋದನೆ ದೊರೆತರೂ, ಇದಕ್ಕೆ ಇನ್ನೂ ಅಡಿಗಲ್ಲು ಹಾಕಿಲ್ಲ. ನಬಾರ್ಡ್ ಸಹಯೋಗದಲ್ಲಿ ವಂದಾರಗುಪ್ಪೆ ಸಮೀಪ 75 ಕೋಟಿ ರೂ.ವೆಚ್ಚದಲ್ಲಿ ವಾರುಕಟ್ಟೆ ನಿರ್ವಾಣ ಕೇವಲ ರಾಜಕೀಯ ಭಾಷಣಕ್ಕೆ ಸೀಮಿತವಾಗಿದೆ. ಭೈರಾಪಟ್ಟಣ ಮಾವು ಸಂಸ್ಕರಣ ಘಟಕ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಳಿಸುವಲ್ಲಿ ಸರ್ಕಾರ ವಿಲವಾಗಿದೆ.
ಇದೆಷ್ಟೇ ಅಲ್ಲದೆ, ವೀರಾಪುರ, ಬಾನಂದೂರು ಅಭಿವೃದ್ಧಿಯೂ ಕಾಟಾಚಾರಕ್ಕೆ ಎನ್ನುವಂತಾಗಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಶೃಂಗಕ್ಕೆ ಸೀಮಿತವಾಗಿ ನಿಂತಲ್ಲೇ ನಿಂತಿದೆ. ಬಿಜೆಪಿ ಸರ್ಕಾರಕ್ಕೂ ಮುನ್ನ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದು, ಜಿಲ್ಲೆಯವರೇ ಆದ ಎಚ್.ಡಿ.ಕುವಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಹತ್ತು ಹಲವು ಯೋಜನೆಗಳನ್ನು ಜಿಲ್ಲೆಗೆ ನೀಡಿದ್ದರು. ಆದರೆ,ಅವುಗಳಲ್ಲಿ ಹೆಚ್ಚಿನವು ಕಾಗದದಲ್ಲಿಯೇ ಉಳಿದು ಹೋಗಿವೆ. ಮಂಚನೆಬೆಲೆ ಅಭಿವೃದ್ಧಿಗೆ ಎಚ್‌ಡಿಕೆ ಬಜೆಟ್‌ನಲ್ಲಿ 125 ಕೋಟಿ ರೂ.ನೀಡಿದ್ದರು. ಆದರೆ, ಬೃಂದಾವನ ಮಾದರಿ ಇರಲಿ ಮುರಿದು ಹೋದ ಸೇತುವೆ ನಿರ್ಮಾಣಕ್ಕೂ ಸರ್ಕಾರ ಮುಂದಾಗಿಲ್ಲ. ಹೀಗೆ ಸಾಕಷ್ಟು ಯೋಜನೆಗಳು ಕಾಗದದಲ್ಲಿಯೇ ಉಳಿದಿವೆ.
ಹಳೆಯವಕ್ಕೆ ಜೀವ ತುಂಬಲಿ
ಸರ್ಕಾರ ಬಜೆಟ್‌ನಲ್ಲಿ ಭರಪೂರವಾದ ಯೋಜನೆಗಳನ್ನು ೋಷಣೆ ಮಾಡಿ ಜನರ ವಿಶ್ವಾಸ ಗಿಟ್ಟಿಸಿಕೊಳ್ಳುವ ಬದಲು, ಈ ಹಿಂದೆ ಜಿಲ್ಲೆಗೆ ೋಷಣೆ ಮಾಡಿದ್ದ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿದರೆ ಉತ್ತಮ ಎನ್ನುವಂತಾಗಿದೆ. ಈ ಹಿಂದೆ ೋಷಣೆ ಮಾಡಿರುವ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೆಲವೊಂದಕ್ಕೆ ಆರ್ಥಿಕ ಕೊರತೆ ಕಾರಣ ಎನ್ನುವ ನೆಪ ಸರ್ಕಾರದಿಂದಲೇ ಹೊರ ಬೀಳುತ್ತಿದೆ. ಆದರೆ, ೋಷಣೆ ಮಾಡಿದ ಯೋಜನೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ.
ಬೇಕಿದೆ ಸರ್ಕಾರದ ಸ್ಪಂದನೆ
ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತ ಬಸ್ ನಿಲ್ದಾಣ, ಮೆಗಾ ವಾರುಕಟ್ಟೆ, ಕಸ ವಿಲೇವಾರಿ ಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಿದೆ. ಬೆಂಗಳೂರು ಮೆಟ್ರೋ ವಾರ್ಗ ವಾಗಡಿವರೆಗೆ ವಿಸ್ತರಿಸಬೇಕು, ವಾಗಡಿ ಕೋಟೆ ಮತ್ತು ತಾಲೂಕು ಕ್ರೀಡಾಂಗಣ ಅಭಿವೃದ್ಧಿ, ತಾಲೂಕಿನ ಸ್ಮಾರಕಗಳ ರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ, ಚನ್ನಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಅನುದಾನ, ಗೊಂಬೆ ಉದ್ಯಮಕ್ಕೆ ಪುನಶ್ಚೇತನ, ಕರಕುಶಲ ಕಾರ್ಮಿಕರಿಗೆ ನೆರವು, ಮೇಕೆದಾಟು ಅಣೆಕಟ್ಟೆ ನಿರ್ವಾಣ, ಹಾರೋಹಳ್ಳಿ ನೂತನ ತಾಲೂಕಿಗೆ ಅನುದಾನ, ಸಾತನೂರು ಪ್ರತ್ಯೇಕ ತಾಲೂಕು ಕೇಂದ್ರ ರಚನೆ, ಕನಕಪುರ ವಾರ್ಗವಾಗಿ ರೈಲು ವಾರ್ಗ ರಚನೆ, ಸಂಗಮ, ಮೇಕೆದಾಟು, ಚುಂಚಿ ಜಲಪಾತ ಮೊದಲಾದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒಂದಷ್ಟು ಸ್ಪಂಧನೆ ಸರ್ಕಾರದಿಂದ ದೊರೆಯಬೇಕಿದೆ.
ಸರ್ಕಾರ ಪ್ರತಿ ವರ್ಷ ಹೊಸ ೋಷಣೆಗಳನ್ನು ಮಾಡುವ ಬದಲು, ಹಿಂದೆ ೋಷಣೆ ಮಾಡಿರುವ ಯೋಜನೆಗಳಿಗೆ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ. ಜತೆಗೆ ಕೃಷಿ, ನೀರಾವರಿ ಯೋಜನೆಗಳ ಜಾರಿಗೆ ಮೊದಲ ಆದ್ಯತೆ ನೀಡಬೇಕು.
ಸಿ.ಪುಟ್ಟಸ್ವಾಮಿ, ರೈತ ಮುಖಂಡರು