ಜಿಲ್ಲೆ

ವ್ಹೀಲಿಂಗ್ ಮಾಡಿದ್ದ ಯುವಕ ಒಂದು ತಿಂಗಳ ನಂತರ ಅಂದರ್ ಸ್ಕೂಟರ್ ಮಾಲೀಕನ ಮೇಲೂ ಕೇಸ್

ಬಿಡದಿ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದ ಯುವಕನ್ನ ಬಿಡದಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಕೇತಾಗನಹಳ್ಳಿಯ ಬಳಿ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬಾನಂದೂರು ಗ್ರಾಮದ ದರ್ಶನ್ ಡಿಯೋ‌ ಸ್ಕೂಟರ್ ನಲ್ಲಿ ವ್ಹೀಲಿಂಗ್ ಮಾಡಿದ್ದ. ಈ ದೃಶ್ಯವನ್ನ ಮೊಬೈಲ್ ನಲ್ಲಿ‌ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಘಟನೆ ನಡೆದು ಒಂದು ತಿಂಗಳ ನಂತರ ವ್ಹೀಲಿಂಗ್ ವೀಡಿಯೋ ಸಕತ್ ವೈರಲ್ ಆಗಿತ್ತು. ಇದರಿಂದ ಹೆಚ್ಚೆತ್ತ ಬಿಡದಿ ಪೊಲೀಸರು ಕಾರ್ಯಚರಣೆ ನಡೆಸಿ ವ್ಹೀಲಿಂಗ್ ಮಾಡಿದ್ದ ಯುವಕ ದರ್ಶನ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದರ್ಶನ್ ಹೆಲೆಟ್ ಧರಿಸದೇ ಸ್ಕೂಟರ್ ನಲ್ಲಿ ವೀಲಿಂಗ್ ಮಾಡಿ ಈ ವಿಡಿಯೋ ವನ್ನು  ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ಇದೀಗ ಇತನಿಗೆ ಕಂಟಕವಾಗಿ ಪರಿಣಮಿಸಿದೆ. ವ್ಹೀಲಿಂಗ್ ಮಾಡಿದ್ದ ದರ್ಶನ್ ಜೊತೆಗೆ ಸ್ಕೂಟರ್ ಮಾಲೀಕ ರಾಜಣ್ಣ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.