ಜಿಲ್ಲೆ

ಪ್ರತಿಷ್ಠಿತ ಕಂಪನಿಗಳ ನಕಲಿ ಉತ್ಪನ್ನ ವಶ ಬಿಡದಿಯ 5 ಅಂಗಡಿಗಳ ಮೇಲೆ ದಾಳಿ

ಗಂಗಾಧರ ಬಿ ವಿ

ಬಿಡದಿ: ಪ್ರತಿಷ್ಠಿತ ಕಂಪನಿಗಳ ಹೆಸರಿನ ನಕಲಿ ಟೀ ಪುಡಿ, ಸರ್ಫ್ ಎಕ್ಸೆಲ್ ಹಾಗೂ ಸೋಪುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿದರು.

ಹಿಂದೂಸ್ತಾನ್ ಕಂಪನಿಯ 3 ರೋಸಸ್ ಟೀಪುಡಿ, ಸರ್ಫ್ ಎಕ್ಸೆಲ್ ಹಾಗೂ ಬಟ್ಟೆ ಸಾಬೂನುಗಳನ್ನು ನಕಲಿ ಮಾಡಿ ಹಲವು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಕಂಪನಿಯ ವಿಜಯ್ ವಿಘ್ನೇಶ್ ಅವರು ಬಿಡದಿ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ 5 ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ನಕಲಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣ ವ್ಯಾಪ್ತಿಯ ಚಾಮುಂಡಿ ಪ್ರಾವಿಷನ್ ಸ್ಟೋರ್ಸ್‌, ಬಾಲಾಜಿ ಟ್ರೇಡರ್ಸ್, ಮಂಜುನಾಥ, ಕಂಚಿ, ಬಿಜಿಎಸ್ ರಸ್ತೆಯ ಗೋಲ್ಡನ್ ಟ್ರೇಡರ್ಸ್ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ.