ಜಿಲ್ಲೆ

ದಶಪಥದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿದ ಕೆಎಸ್ ಆರ್ ಟಿಸಿ ಚಾಲಕನ ವಿರುದ್ಧ ಪ್ರಕರಣ

ರಾಮನಗರ: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯಲ್ಲಿ ನಿಯಮ ಮೀರಿ ವಿರುದ್ಧ ದಿಕ್ಕಿನಲ್ಲಿ  ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸುತ್ತಿದ್ದ ಚಾಲಕನ ವಿರುದ್ದ ಬಿಡದಿ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಡದಿ ಸಮೀಪದ ಶೇಷಗಿರಿ ಟೋಲ್ ಪ್ಲಾಜಾದಿಂದ ಹನುಮಂತನಗರದ ಆಂಜನೇಯ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಕೆಎ–10, ಎಫ್– 0492 ನಂಬರ್‌ನ ಬಸ್‌ ಜುಲೈ 14ರಂದು ಬೆಳಿಗ್ಗೆ 10.41ರ ಸುಮಾರಿಗೆ ದಶಪಥ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅತೀ ವೇಗವಾಗಿ ಚಲಾಯಿಸುತ್ತಿದ್ದ.  ಈ ಫೋಟೋವನ್ನು  ಅಭಿಷೇಕ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು
ಈ ಪೋಸ್ಟ್ ಆಧರಿಸಿ, ಬಸ್‌ನ ನಂಬರ್‌ ಅನ್ನು ನಮೂದಿಸಿಕೊಂಡು ಚಾಲಕನ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.