ಜಿಲ್ಲೆ

ವಿದೇಶಿ ನಾಯಿಗಾಗಿ ಹಣ ಕಳೆದುಕೊಂಡರು

ಬಿಡದಿ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬಂತೆ ಆನ್ ಲೈನ್ ನಲ್ಲಿ ವ್ಯಕ್ತಿಯೊಬ್ಬ "ವಿದೇಶಿ ತಳಿಯ ನಾಯಿಯನ್ನ ಕೊಂಡುಕೊಳ್ಳಲು ಹೋಗಿ 43,000 ರೂ. ಹಣ ಕಳೆದುಕೊಂಡಿದ್ದಾರೆ.

ಪಟ್ಟಣದ ಬಾಳಪ್ಪ ಬಡಾವಣೆಯ ನಿವಾಸಿ ನಿತೇಶ್ ಕುಮಾರ್ ಹಣ ಕಳೆದುಕೊಂಡವರು. ಇ-ಮೇಲ್ ಮುಖಾಂತರ ಪರಿಚಯವಾದ ಅಪರಿಚಿತ ವ್ಯಕ್ತಿ, ನಿಮಗೆ ಜರ್ಮನ್ ಮೂಲದ ಅಸ್ಕಿ ತಳಿಯ ನಾಯಿಯನ್ನ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾನೆ. ನಂತರ ನಾಯಿಯನ್ನ ತರಿಸಲು ಟ್ರಾನ್ಸ್‌ಪೋರ್ಟ್ ವೆಚ್ಚ, ನಾಯಿುಗೆ ಇನ್ಸೂರೆನ್ಸ್ ಹಾಗೂ ಬೋನು ವೆಚ್ಚವೆಂದು 12500 ರೂ.ಗಳನ್ನ ಹಾಕಬೇಕು ಹಾಗೂ ಇತರೆ ಸರ್"ಸ್ ಚಾರ್ಜ್ ಎಂದು 30,500 ರೂ ಹಣವನ್ನ  ನೆಟ್ ಬ್ಯಾಂಕಿಂಗ್ ಮೂಲಕ ಹಾಕಿಸಿಕೊಂಡಿದ್ದಾರೆ.

ಅಪರಿಚಿತರ ಖಾತೆಗೆ ಹಣ ಹಾಕಿದ ನಂತರ ನಾಯಿ ಯಾವಾಗ ಬರುತ್ತೆ ಅಂತ ಅವರು ನೀಡಿದ್ದ ಪೋನ್ ನಂಬರ್‌ಗೆ ಕರೆ ಮಾಡಿ ನಿತೇಶ್ ಕೇಳಿದಾಗ, ನಾಳೆ ನಾಡಿದ್ದು ಎನ್ನುವ ಉತ್ತರ ಬಂದಿದೆ. ವಾರ ಕಳೆದರು ನಾಯಿ ಬರಲಿಲ್ಲ, ಅತ್ತ ಕರೆಯನ್ನು ಸ್ವೀಕರಿಸದೆ ವಂಚಿಸಿದ್ದಾನೆ.

ಈ ಸಂಬಂದ ರಾಮನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.