Security breach warning on smartphone screen, device infected by internet virus or malware after cyberattack by hacker, fraud alert with red padlock icon 
ಜಿಲ್ಲೆ

ಫೋನ್ ಕರೆಗೆ ಹೆದರಿ 6.25 ಲಕ್ಷ ರೂ ಕಳೆದುಕೊಂಡ ಮಹಿಳೆ

ಬಿಡದಿ: ನಿಮಗೆ ಲಂಡನ್ ನಿಂದ ಫೌಂಡ್ಸ್ ಕರೆನ್ಸಿ ಬಂದಿದೆ ಅದನ್ನ ನಮ್ಮ ದೇಶದ ಕರೆನ್ಸಿಗೆ ಕನ್ವರ್ಟ್ ಮಾಡಲು ಹಣ ಹಾಕಿ ಎಂದು ಮಹಿಳೆಯನ್ನ ನಂಬಿಸಿ ಲಕ್ಷಾಂತರ ಹಣವನ್ನ ದೋಖಾ ಮಾಡಿರುವ ಘಟನೆ ನಡೆದಿದೆ.

ವಾಜರಹಳ್ಳಿ ಗ್ರಾಮದ ಹೇಮಲತಾ ಅವರಿಗೆ 6.25 ಲಕ್ಷ ರೂ ಹಣ ದೋಖಾ ಆಗಿದೆ. ಇದೇ ತಿಂಗಳ 3 ರಂದು 8131036037 ನಂಬರ್ ನಿಂದ ಹೇಮಲತಾ ಅವರ ಮೊಬೈಲ್ ಗೆ ಕರೆ ಮಾಡಿ ನಾನು ದೆಹಲಿ ವಿಮಾನ ನಿಲ್ದಾಣದಿಂದ ಕರೆ ಮಾಡುತ್ತಿದ್ದೇನೆ ನಿಮ್ಮ ಹೆಸರಿಗೆ ಯು.ಕೆ ಫೌಂಡ್ಸ್ ಬಂದಿದೆ ಅದನ್ನ ತಗೆದುಕೊಳ್ಳಲು ಹಣವನ್ನ ಬದಲಿಸಲು 6 ಲಕ್ಷ ಹಣ ಹಾಕಿ ಎಂದು ಹೇಳಿದ್ದಾರೆ.

ಈ ವೇಳೆ ಹೇಮಲತಾ ಅವರು ನನಗೆ ಯಾವುದೇ ಹಣ ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಅನಾಮಧೇಯ ವ್ಯಕ್ತಿ ಹಣ ಪಡೆದಿಲ್ಲ ಅಂದರೆ ನಿಮ್ಮ ಮೇಲೆ ಪೊಲೀಸ್ ಕೇಸು ಆಗುತ್ತೆ ಎಂದು ಹೆದರಿಸಿದ್ದಾನೆ.

ಈ ಪೋನ್ ಕರೆಗೆ ಹೆದರಿ 5 ಹಾಗೂ 6 ನೇ ತಾರೀಖು ಅವರು ನೀಡಿದ್ದ ಕೆನರಾ ನ್ಯಾ ಖಾತೆಗೆ 6.25 ಲಕ್ಷ ರೂ ಹಣ ಹಾಕಿದ್ದಾರೆ. ಹಣ ಹಾಕಿದ ಮೇಲೆ ಪೋನ್ ಮಾಡಿದ್ದಾರೆ ಆದರೆ ಆ ನಂಬರ್ ಸ್ವಿಚ್ ಆಪ್ ಆಗಿದೆ.

ಎಷ್ಟು ಸಲ ಪ್ರಯತ್ನ ಮಾಡಿದರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.