ಬಿಡದಿ: ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಿಸಿ ಎಂದು ಕರೆ ಮಾಡಿದ ಅನಾಮಧೇಯ ವ್ಯಕ್ತಿ 1 ಲಕ್ಷ ರೂ.ದೋಖಾ ಮಾಡಿದ್ದಾನೆ.
ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮುತ್ತರಾಯನಪುರದ ರಾಚಯ್ಯಗೆ ಜೂ.21ರಂದು ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಿಸುವಂತೆ ಸಂದೇಶ (ಎಸ್‌ಎಂಎಸ್) ಬಂದಿತ್ತು.
ಸಂದೇಶದಲ್ಲಿದ್ದ ಮೊಬೈಲ್ ಸಂಖ್ಯೆಗೆ ರಾಚಯ್ಯ ಕರೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ, ಅಗತ್ಯ ಮಾಹಿತಿ ಜತೆಗೆ ಎರಡು ಬಾರಿ ಮೊಬೈಲ್‌ಗೆ ಬಂದಿರುವ ಒಟಿಪಿ ಪಡೆದಿದ್ದು, ಒಮ್ಮೆ 99.999 ರೂ. ಮತ್ತೊಮ್ಮೆ 570 ರೂ. ಖಾತೆಯಿಂದ ಕಡಿತವಾಗಿದೆ. ನಂತರ ಅದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವೀಚ್ಡ್‌ಆ್ ಆಗಿದೆ. ಇದರಿಂದ ಮೋಸವಾಗಿದೆ ಎಂದು ಅರಿತ ರಾಚಯ್ಯ ರಾಮನಗರ ಠಾಣೆಯಲ್ಲಿ (ಸಿಇಎನ್) ದೂರು ದಾಖಲು ಮಾಡಿದ್ದಾರೆ.