ರಾಮನಗರ: ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಬೆಂಗಳೂರು ಮೈಸೂರು ದಶಪಥ ಹೆದಾರಿಯಲ್ಲಿ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವೇಗಮಿತಿಯನ್ನು 80 ಕಿಲೋಮೀಟರ್ ದಿಂದ 100 ಕಿಲೋಮೀಟರ್ ಗೆ ಚಲಿಸಲು ಅವಕಾಶವಾಗುವಂತೆ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದ್ದು ಈ ವೇಗಕ್ಕೆ ಹೊಂದಿಕೊಳ್ಳಲು ಹಾಗೂ ರಸ್ತೆ ಸುರಕ್ಷತೆಗೆ ಹೊಂದಿಕೊಳ್ಳದ ಕಾರಣ ದ್ವಿಚಕ್ರ ವಾಹನಗಳು ತ್ರಿಚಕ್ರ ವಾಹನಗಳು ಟ್ರ್ಯಾಕ್ಟರ್ಗಳು ಸೇರಿದಂತೆ ಕೆಲವು ವಾಹನಗಳ ಮೇಲೆ ನಿಷೇಧವನ್ನು ಮಾಡಲಾಗಿದೆ ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಆದೇಶವನ್ನು ಹೊರಡಿಸಿದ್ದಾರೆ.
ಯಾವ ವಾಹನಗಳಿಗೆ ನಿಷೇಧ?
1. ಮೋಟರ್ ಸೈಕಲ್ ಗಳು( ಸ್ಕೂಟರ್ ಹಾಗೂ ಇತರೆ ಚಕ್ರ ವಾಹನಗಳು)
2. ಮೂರು ಚಕ್ರದ ವಾಹನಗಳು( ಇ ಗಾಡಿಗಳು ಮತ್ತು ಇ ರೀಕ್ಷಾಗಳು)
3. ಮೋಟಾರ್ ರಹಿತ ವಾಹನಗಳು
4. ಟ್ರೈಲರ್ ಗಳ ಸಹಿತ ಹಾಗೂ ರಹಿತವಾದ ವಿಶೇಷ ಟ್ರಾಕ್ಟರ್ ಗಳು
5. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು
6. ಕ್ವಾಡ್ರಿ ವಾಹನಗಳು