ರಾಮನಗರ
ಬೆಂಗಳೂರು ಹಾಲು ಒಕ್ಕೂಟದ (ಬಮುಲ್) ಅಧ್ಯಕ್ಷ ಸ್ಥಾನಕ್ಕೆ ಮಾಗಡಿಯ ನರಸಿಂಹಮೂರ್ತಿ ರಾಜೀನಾಮೆ ನೀಡಿದ್ದು, ನೂತನ ಸಾರಥಿ ನೇಮಕಕ್ಕೆ ಸಿದ್ಧತೆ ನಡೆದಿದೆ.
ಮಾಗಡಿ ಎಂಪಿಸಿಎಸ್ ವ್ಯಾಪ್ತಿಯಿಂದ ನಿರ್ದೇಶಕರಾಗಿದ್ದ ನರಸಿಂಹಮೂರ್ತಿ ಅವರು ಜೂ.16ರಂದು ರಾಜೀನಾಮೆ ನೀಡಿದ್ದು, ನಿಯಮದಂತೆ 15 ದಿನಗಳ ಒಳಗೆ ರಾಜೀನಾಮೆ ಅಂಗೀಕಾರವಾಗಿದೆ. ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಬಿರುಸುಗೊಂಡಿದೆ.
ಪ್ರಮುಖವಾಗಿ ಕನಕಪುರದಿಂದ ಬಮುಲ್ಗೆ ನಿರ್ದೇಶಕರಾಗಿರುವ ರಾಜ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರ್ದೇಶಕ ಕೇಶವಮೂರ್ತಿ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಬಮುಲ್ ಅಧ್ಯಕ್ಷ ಸ್ಥಾನಕ್ಕೆ ಕನಕಪುರ ಕ್ಷೇತ್ರದವರೇ ಆದ ರಾಜ್ಕುಮಾರ್ ಅವರನ್ನೇ ನೇಮಕ ಮಾಡಿಕೊಳ್ಳಬೇಕು ಎನ್ನುವ ಇರಾದೆ ಡಿ.ಕೆ.ಸಹೋದರರಲ್ಲಿ ಇದೆ. ಯಾರು ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.