ಮಾಗಡಿ: ಏಪ್ರಿಲ್ 1ರಿಂದ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡುವುದಾಗಿ ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆಯಿಂದಾಗಿ ಪಶು ಆಹಾರದ ಬೆಲೆ ಹೆಚ್ಚಳ ಹಾಗೂ ಮೇವಿನ ಅಭಾವದಿಂದಾಗಿ ಹಾಲಿನ ಪ್ರವಾಣ ಕಡಿಮೆಯಾಗುತ್ತಿದೆ. ಪ್ರತಿದಿನ 15 ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇದ್ದು, 13.50 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ.
ಉತ್ಪಾದಕರ ಹಿತ ಕಾಪಾಡುವ ನಿಟ್ಟಿನಲ್ಲಿ ಬಮುಲ್ ಆಡಳಿತ ಮಂಡಳಿ ಚರ್ಚಿಸಿ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ಈಗ ನೀಡುತ್ತಿರುವ 31 ರೂ.ಗಳಿಗೆ ಬದಲಾಗಿ ಏ.1ರಿಂದ 34 ರೂ. ನೀಡಲಾಗುವುದು ಎಂದರು.
ಹಾಲಿನ ಬೆಲೆ ಏರಿಕೆ ಮಾಡುವಂತೆ ಎಲ್ಲ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ಆದಾಯದಿಂದಲೇ ರೈತರ ಹಿತ ಕಾಪಾಡಲು ಬೆಂಗಳೂರು ಹಾಲು ಒಕ್ಕೂಟ ತೀರ್ಮಾನಿಸಿದೆ ಎಂದರು.
ದೇಸಿ ತಳಿ ನಾಟಿ ಹಸುವಿನ ಹಾಲಿಗೆ ಹೆಚ್ಚು ಬೇಡಿಕೆ ಇದ್ದು, ಪ್ರಸಕ್ತ 3 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ಲೀಟರ್ ಹಾಲಿಗೆ 55 ರೂ. ನೀಡಲಾಗುತ್ತಿದ್ದು, 80 ರೂ.ಗಳಿಗೆ ಮಾರಾಟ ವಾಡಲಾಗುತ್ತಿದೆ. ಈ ಹಾಲಿಗೂ ಪ್ರತಿ ಲೀಟರ್‌ಗೆ ಏ.1ರಿಂದ 3 ರೂ. ಹೆಚ್ಚಳ ಮಾಡಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ ನಾಟಿ ಹಸುವಿನ ಹಾಲಿಗೆ ಹೆಚ್ಚು ಬೇಡಿಕೆಯಿದ್ದು, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡರೆ ಅರ್ಧ ಗಂಟೆಯಲ್ಲಿ ಮನೆ ಬಾಗಿಲಿಗೆ ಹಾಲು ತಲುಪಿಸಲು ತಿರ್ವಾನಿಸಲಾಗಿದೆ ಎಂದರು.