ರಾಮನಗರ: ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ಬಂದು ಗ್ರಾಮದ ಮಧ್ಯ ಭಾಗದಲ್ಲೇ ನಿವೃತ್ತ ಎಎಸ್‌ಐ ಒಬ್ಬರಿಗೆ ಲಾಂಗಿನಿಂದ ಹಲ್ಲೇ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಕಾಡನಕುಪ್ಪೆ ಗ್ರಾಮದ ನಿವೃತ್ತ ಎಎಸ್‌ಐ ಕೃಷ್ಣಯ್ಯ (63) ಎಂಬುವರೇ ಹಲ್ಲೆಗೊಳಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ : ನಿವೃತ್ತ ಎಎಸ್‌ಐ ಕೃಷ್ಣಯ್ಯ ಗ್ರಾಮದ ಲಕ್ಕೋಜನಹಳ್ಳಿ ಸಮೀಪದ ತಮ್ಮ ಜಮೀನಿದೆ. ಈ ಜಮೀನಿನಲ್ಲಿ ಲಕ್ಕೋಜನಹಳ್ಳಿ ಗ್ರಾಮದ ಮಹದೇವ, ಕಿರಣ್ ಚನ್ನೇನಹಳ್ಳಿಯ ಹನುಮ ಜೊತೆಗೆ ಇನ್ನೊಬ್ಬ ವ್ಯಕ್ತಿ ಕಾರಿನಲ್ಲಿ ಬಂದು ಈಶ್ವರ್, ಕೃಷ್ಣಯ್ಯ ಅವರ ಜಮೀನಿನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಕೃಷ್ಣಯ್ಯ ತಮ್ಮ ಈಶ್ವರ್ ಮದ್ಯಪಾನ ಮಾಡಬೇಡಿ ಎಂದು ತಡೆದಿದ್ದಾರೆ.
ಇದರಿಂದ ಕುಪಿತಗೊಂಡ ಯುವಕರು, ಈಶ್ವರ್ ಮೇಲೆರಗಿ ಹಲ್ಲೇ ನಡೆಸಿ ಗಲಾಟೆ ಮಾಡಿದ್ದಾರೆ. ಗಲಾಟೆ ವಿಷಯ ತಿಳಿಯುತ್ತಲೇ ಈಶ್ವರ್ ಹೆಂಡತಿ ಕಲಾವತಿ ಮತ್ತು ನಿವೃತ್ತ ಎ ಎಸ್ ಐ ಕೃಷ್ಣಯ್ಯ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಲಾಟೆ ಹೆಚ್ಚಾಗುತ್ತಲೇ ಕೃಷ್ಣಯ್ಯ ತಮ್ಮ, ತಮ್ಮನ ಹೆಂಡತಿ ಸೇರಿ ಎರಡು ಬೈಕುಗಳಲ್ಲಿ ರಾಮನಗರ ಪೋಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದಾರೆ.
ಈ ವೇಳೆ ನಿವೃತ್ತ ಎಎಸ್‌ಐ ಕೃಷ್ಣಯ್ಯ ಅವರನ್ನು ಕಾರಿನಲ್ಲಿ ಹಿಂಬಾಲಿಸಿದ ಮಹದೇವ, ಕಿರಣ್ ಚನ್ನೇನಹಳ್ಳಿಯ ಹನುಮ ಮೊತ್ತೊಬ್ಬ ಬನ್ನಿಕುಪ್ಪೆ ಗ್ರಾಮದ ಮದ್ಯೆಯೇ ಬಸ್ ನಿಲ್ದಾಣ, ಬಸವೇಶ್ವರ ದೇವಾಲಯ ಸಮೀಪವೇ ಅಡ್ಡಗಟ್ಟಿ ಕೃಷ್ಣಯ್ಯ ಅವರಿಗೆ ಲಾಂಗ್ ಬೀಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಕೈ ಎತ್ತಿದ್ದಾರೆ. ಕೃಷ್ಣಯ್ಯ ಅವರ ಅಂಗೈಗೆ ಬಲವಾದ ಪೆಟ್ಟು ಬಿದ್ದದೆ. ಜೊತೆಗೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕೂಡಲೇ ಕೃಷ್ಣಯ್ಯ ಕೆಳಕ್ಕೆ ಬಿದ್ದಿದ್ದಾರೆ. ಇತ್ತ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತೀವ್ರ ನಿತ್ರಾಣಗೊಂಡು, ರಕ್ತಸ್ರಾವದಿಂದ ನರಳುತ್ತಿದ್ದ ಕೃಷ್ಣಯ್ಯ ಅವರನ್ನು ಆಟೋ ಒಂದರಲ್ಲಿ ತಕ್ಷಣವೇ ರಾಮನಗರ ಆಸ್ಪತ್ರೆಗೆ ಕರೆತಂದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಂಗೈಗೆ ಹೆಚ್ಚಿನ ಗಾಯ ಆಗಿರುವ ಕಾರಣ ಬೆರಳುಗಳು ಉಳಿಯಲು ಚಿಕಿತ್ಸೆ ಮಾಡಲಾಗಿದೆ ಎನ್ನಲಾಗಿದೆ.
ರಾಮನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹದೇವ, ಕಿರಣ, ಹನುಮ ಹಾಗೂ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.