ಜಿಲ್ಲೆ

ಎಸಿ ಮಂಜುನಾಥ್ ಅಮಾನತ್ತು ಆದೇಶಕ್ಕೆ ಕೆಎಟಿ ತಡೆಯಾಜ್ಞೆ

ಗಂಗಾಧರ ಬಿ ವಿ

ರಾಮನಗರ: ವರ್ಷದ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದರೂ ಇತ್ತೀಚಿಗಷ್ಟೇ ರಾಮನಗರ ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಅವರನ್ನು ಅಮಾನತ್ತು ಮಾಡಿದ್ದ ಸರ್ಕಾದ ಆದೇಶಕ್ಕೆ ಕೆಎಟಿ ತಡೆಯಾಜ್ಞೆ ನೀಡಿದೆ.

ಮಾ.17ರಂದು ಮಂಜುನಾಥ್ ಅವರನ್ನು ಅಮಾನತ್ತು ಮಾಡಿದ ಸಿಬ್ಬಂದಿ ಆಢಳಿತ ಸುಧಾರಣೆ ಇಲಾಕೆ ಅಮಾನತ್ತು ಮಾಡಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಮಂಜುನಾಥ್ ಕೆಎಟಿ ಮೊರೆ ಹೋಗಿದ್ದರು. ಅಲ್ಲದೆ, ಒಂದು ವರ್ಷದ ದಾಳಿ ನಡೆಸಿದ್ದರೂ ಈಗ ತಮ್ಮನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎನ್ನುವ ವಾದವನ್ನು ಮಂಡಿಸಿದ್ದರು.

ವಾದವನ್ನು ಆಲಿಸಿದ ಕೆಎಟಿ ಉಪವಿಭಾಗಾಧಿಕಾರಿ ಮಂಜುನಾಥ್ ಅವರ ಅಮಾನತ್ತು ಆದೇಶಕ್ಕೆ ಮುಂದಿನ ವಿಚಾರಣೆ ವರೆಗೂ ತಡೆ ನೀಡಿ, ವಿಚಾರಣೆಯನ್ನು 2023ರ ಏಪ್ರಿಲ್ 19ಕ್ಕೆ ಮುಂದೂಡಿದೆ.

ಹಿನ್ನೆಲೆ ಏನು?: 2022ರ ಮಾರ್ಚ್ 16ರಂದು ಮಂಜುನಾಥ್ ಅವರಿಗೆ ಸೇರಿದ ಬೆಂಗಳೂರು, ಯಲಹಂಕ ಸೇರಿದಂತೆ ವಿವಿಧ ಆಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು.

ಈ ವೇಳೆ ಒಟ್ಟು 94377750 ರೂ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಪತ್ತೆಯಾಗಿತ್ತು. ಆದರೆ ಮಂಜುನಾಥ್ ಅವರು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಎಸಿಬಿ ಹೇಳಿತ್ತು.  ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾ ನಿರ್ದೇಶಕರು ಮಂಜುನಾಥ್ ಅವರನ್ನು ಅಮಾನತ್ತುಗೊಳಿಸುವಂತೆ, ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. 2023ರ ಮಾ.17ರಂದು ಅವರನ್ನು ಅಮಾನತ್ತು ಪಡಿಸಿ ಸರ್ಕಾರ ಆದೇಶ ಮಾಡಿತ್ತು. ಈ ಆದೇಶಕ್ಕೆ ಕೆಎಟಿ ಮಾ.21ರಂದು ತಡೆಯಾಜ್ಞೆ ನೀಡಿದೆ.