ರಾಮನಗರ : ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ, ಅನಧಿಕೃತ ಲೇಔಟ್ ನಿರ್ವಾಣವನ್ನು ಗುರುತಿಸಿ ಅವುಗಳ ತೆರವಿಗೆ ಶೀಘ್ರ ಕಾನೂನು ಕ್ರಮವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 1,496 ಕೆರೆಗಳಿದ್ದು, ಇದುವರೆವಿಗೂ 1,226 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಉಳಿದ 270 ಕೆರೆಗಳು ಸರ್ವೇ ವಾಡಬೇಕಾಗಿದೆ ಎಂದು ಭೂದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಸಭೆಗೆ ವಾಹಿತಿ ನೀಡಿದರು.
ಉಳಿದ 270 ಕೆರೆಗಳ ಸರ್ವೇ ಕಾರ್ಯವನ್ನು ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ರಶ್ಮಿ ಮಹೇಶ್ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 12 ಸಾವಿರ ಎಕರೆ ಜಮೀನು ಒತ್ತುವರಿಯಾಗಿದ್ದು, ಇದರಲ್ಲಿ 1400 ಎಕರೆ ಜಮೀನನ್ನು ವಶಪಡಿಸಕೊಳ್ಳಲಾಗಿದೆ. ಉಳಿದ ಒತ್ತುವರಿ ಜಮೀನನ್ನು ವಶಪಡಿಸಿಕೊಳ್ಳಲು ಕ್ರಮವಹಿಸುವಂತೆ ತಿಳಿಸಿದರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಇದುವರೆವಿಗೆ 1.87 ಕೋಟಿ ರೂ. ರಾಜಸ್ವ ಗುರಿ ನೀಡಲಾಗಿತ್ತು. ಆದರೆ, ಜಿಲ್ಲೆಯಲ್ಲಿ ನಿಗಿದಿಪಡಿಸಿದ ಗುರಿಗಿಂತ ಹೆಚ್ಚಾಗಿ ಸಂಗ್ರಹವಾಗಿದೆ. ಈವರೆವಿಗೂ 1.95 ಕೋಟಿ ರೂ. ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆಹಾನಿಗೆ ಪರಿಹಾರ ನೀಡಿ
ಜಿಲ್ಲೆಯಲ್ಲಿ ಜೂನ್‌ನಿಂದ ನವೆಂಬರ್‌ವರೆಗೆ ವಾಡಿಕೆಯಂತೆ 806 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ, 777 ಮಿಲಿ ಮೀಟರ್ ಮಳೆಯಾಗಿದ್ದು, ಸ್ಪಲ್ಪ ಕಡಿಮೆಯಾಗಿದೆ, ಗ್ರಾಮ ಪಂಚಾಯಿತಿಗಳಲ್ಲಿ ಮಳೆಹಾನಿ ಪ್ರದೇಶವನ್ನು ಸಮೀಕ್ಷೆ ಮಾಡಬೇಕು, ಪೂರ್ವ ಮುಂಗಾರುವಿನಲ್ಲಿ ಟೊಮ್ಯಾಟೊ, ಬಾಳೆ, ವಾವು ಸೇರಿ ಒಟ್ಟು 95.59 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸಂಬಂಧಪಟ್ಟವರಿಗೆ ಪರಿಹಾರ ನೀಡಲು ಕ್ರಮವಹಿಸಬೇಕು ಹಾಗೂ ಅವರ ವಿವರಗಳನ್ನು ಕಚೇರಿ ಸೂಚನಾ ಫಲಕ ಹಾಗೂ ಜಿಲ್ಲಾಧಿಕಾರಿಗಳ ಸಾವಾಜಿಕ ಜಾಲತಾಣದಲ್ಲಿ ಪ್ರಕಟಿಸುವಂತೆ ರಶ್ಮಿ ಮಹೇಶ್ ಸಲಹೆ ನೀಡಿದರು.
ಬೆಳೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಪ್ರತಿ ಎಕರೆಗೆ 38 ರಿಂದ 48 ಸಾವಿರ ರೂ. ಪರಿಹಾರ ಲಭಿಸಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ವಾಹಿತಿ ನೀಡಿದರು.
ಆಧಾರ್ ಲಿಂಕ್ ಮಾಡಿಸಿ: ತಹಸೀಲ್ದಾರ್, ಭೂ ದಾಖಲೆಗಳ ಇಲಾಖೆ, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮವಹಿಸುವಂತೆ ಹಾಗೂ ಇನ್ನು ಮುಂದೆ ಎಲ್ಲ ಕಚೇರಿಗಳು ಇಆಫೀಸ್ ತಂತ್ರಾಂಶದಲ್ಲಿ ಪತ್ರ ಮತ್ತು ಕಡತಗಳನ್ನು ಮಂಡಿಸಿ ಮತ್ತು ಎಲ್ಲ ಪರಿಹಾರ ಕಾರ್ಯಗಳಲ್ಲಿ ಆಧಾರ್ ಲಿಂಕ್ ವಾಡಿಸಿ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮೊತ್ತ ಪಾವತಿ ವಾಡುವಂತೆ ರಶ್ಮಿ ಮಹೇಶ್ ಸೂಚಿಸಿದರು.
ಲಿಂಕ್‌ಡ್ಯಾಕ್ಯೂಮೆಂಟ್‌ಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ಎಲ್ಲ ಇಲಾಖೆಗಳು ಬಿಡುಗಡೆಗೊಳಿಸಿರುವ ಅನುದಾನವನ್ನು ವೆಚ್ಚ ವಾಡಲು ಕ್ರಮವಹಿಸಬೇಕು, ಬಾಕಿ ಇರುವ ಕಾಮಕಾರಿಗಳಿಗೆ ಕೂಡಲೇ ಟೆಂಡರ್ ಆಹ್ವಾನಿಸಲು ಕ್ರಮವಹಿಸಬೇಕು ಮತ್ತು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಮುಂದಿನ ಅಗತ್ಯ ಕ್ರಮವಹಿಸುವಂತೆ ರಶ್ಮಿ ಮಹೇಶ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಪಂ ಉಪಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.