ಜಿಲ್ಲೆ

ಸಾಹಿತ್ಯಿಕ ಸೌರಭ ಪಸರಿಸಿದವರು ರಮಾಕಾಂತ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಮ್ಮ ಜೀವನದ ನಶ್ವರತೆಯನ್ನು ನಮ್ಮ ಕಣ್ಮುಂದೆ ತಂದಿಡುವ ಸಂದರ್ಭವೇ ನುಡಿನಮನ. ರಾಮಣ್ಣ ಅವರು ಒಲವು, ಸ್ನೇಹ, ಪ್ರೇಮಗಳನ್ನು ನಮ್ಮೆಲ್ಲರಿಗೆ ನೀಡಿ, ನಮ್ಮಿಂದ ಭೌತಿಕವಾಗಿ ಅಗಲಿದ್ದಾರೆ. ನಮಗೆ ಸ್ಥಿರಸ್ಥಾಯಿಯಾದ ಒಲುಮೆಯ ಸಿಂಚನವಾಗಿದ್ದರು. ಮಿತಭಾಷಿ, ಮೃದುಭಾಷಿಯಾಗಿದ್ದ ರಮಾಕಾಂತ ಕನ್ನಡ ನಾಡಿಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೌರಭ ಪಸರಿಸಿದವರು ಎಂದು ಹಿರಿಯ ಚಿಂತಕ ಜಿ.ಸಿ.ತಲ್ಲೂರ ಹೇಳಿದರು.

ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ಹಾಗೂ ಧಾರವಾಡ ಕಟ್ಟೆ ಸಹಯೋಗದಲ್ಲಿ ಸಾಧನಕೇರಿ ಬೇಂದ್ರೆ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಕಾಶ ಡಾ. ರಮಾಕಾಂತ ಜೋಶಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರವಾಡ ಕಟ್ಟೆ ಅಧ್ಯಕ್ಷ ಪ್ರೊ. ಬಸವರಾಜ ಡೋಣೂರ ಮಾತನಾಡಿ, ರಮಾಕಾಂತ ಶ್ರೇಷ್ಠ ಪ್ರಕಾಶಕರಾಗಿದ್ದರೂ ಸೃಜನಶೀಲ ಬರಹಗಾರ ಆಗುವ ಎಲ್ಲ ಲಣಗಳಿದ್ದವು. ಆದರೆ ತಮ್ಮ ಎಲ್ಲ ಸೃಜನಶೀಲ ಶಕ್ತಿ, ಸಾಮರ್ಥ್ಯವನ್ನೆಲ್ಲ ಪುಸ್ತಕ ಪ್ರಕಾಶನದ ಮೇಲೆ ತೊಡಗಿಸಿದರು. ಮನೋಹರ ಗ್ರಂಥ ಮಾಲೆಯೇ ಅವರ ಅತ್ಯುತ್ತಮ ಕೃತಿಯಾಗಿದೆ ಎಂದರು.

ಡಾ. ಬಾಳಣ್ಣ ಶೀಗಿಹಳ್ಳಿ, ಬೇಂದ್ರೆ ಟ್ರಸ್ಟ್​ ಅಧ್ಯ ಡಾ.ಡಿ.ಎಂ.ಹಿರೇಮಠ, ಶ್ರೀನಿವಾಸ ವಾಡಪ್ಪಿ, ಡಾ. ಶಶಿಧರ ನರೇಂದ್ರ, ಡಾ. ಕೃಷ್ಣ ಕಟ್ಟಿ, ಪ್ರೊ. ಶಶಿಧರ ತೋಡಕರ, ಬಿ.ಎಲ್​.ಪಾಟೀಲ, ಹರ್ಷ ಡಂಬಳ, ಡಾ. ರಾಜಶೇಖರ ಜಾಡರ, ಧನವಂತ ಹಾಜವಗೋಳ, ಡಾ.ಪ್ರಕಾಶ ಗರುಡ, ಡಾ.ಅರವಿಂದ ಯಾಳಗಿ, ನುಡಿ ನಮನ ಸಲ್ಲಿಸಿದರು.

ಮಲ್ಲಿಕಾರ್ಜುನ ಸೊಲಗಿ, ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ವಿಶ್ರಾಂತ ಕುಲಪತಿ ಜೆ.ಎಚ್​.ಕುಲಕಣಿರ್, ಡಾ. ಎಸ್​.ಎಂ.ಶಿವಪ್ರಸಾದ, ಡಾ.ಹ.ವೆಂ. ಕಾಖಂಡಿಕಿ, ಡಾ.ಮುಕುಂದ ಲಮಾಣಿ, ಅನಂತ ದೇಶಪಾಂಡೆ, ರಮೇಶ ನಾಡಗೀರ, ಪ್ರಶಾಂತ ಮಾಂಡ್ರೆ, ಕೌಶಿಕ್​ ಜಿ.ಎನ್​. ಡಿ. ರಮೇಶ, ಇತರರು ಇದ್ದರು.