ಮುಸ್ಲಿಂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ರಾಮಗಿರಿ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸವದತ್ತಿ ಮುಸ್ಲಿಂ ಸಮುದಾಯದಿಂದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರಗೆ ಮನವಿ ಸಲ್ಲಿಸಿದರು. ಮೌಲನಾ ಇಮ್ತಿಯಾಜ್ ಅತ್ತಾರ್, ಮೌಲಾನಾ ಇಲ್ಯಾಸ್, ಹಫೀಜ್ ಅತ್ತಾರ್ ಇತರರು ಇದ್ದರು. 
ಜಿಲ್ಲೆ

ರಾಮಗಿರಿ ಮಹಾರಾಜ್ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಘವೇಂದ್ರಗೌಡ ಭೀ ಪಾಟೀಲ್

ಸವದತ್ತಿ: ಪ್ರವಾದಿ ಮೊಹಮ್ಮದ್ ಹಾಗೂ ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಮುಸ್ಲಿಂ ಧಾರ್ಮಿಕ ಗುರುಗಳು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟಿಸಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮಹಾರಾಷ್ಟ್ರದ ರಾಮಗಿರಿ ಮಹಾರಾಜರು ಇತ್ತೀಚೆಗೆ ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ಶಾ ಪಾಂಚಾಲೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಪ್ರವಾದಿ ಮೊಹಮ್ಮದ್ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇದು ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟು ಮಾಡಿದೆ. ರಾಮಗಿರಿ ಮಹಾರಾಜ್ ವಿರುದ್ಧ ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಮೌಲನಾ ಇಮ್ತಿಯಾಜ್ ಅತ್ತಾರ್, ಮೌಲಾನಾ ಇಲಿಯಾಸ್, ಹಫೀಜ್ ಅತ್ತಾರ್, ಮೌಲಾನಾ ರಫೀಕ್, ಮುಫ್ತಿ ಬಶೀರ್, ಹಫೀಜ್ ನಾಸೀರ್, ಹಫೀಜ್ ಲಿಯಾಕತ್, ಮೌಲಾನಾ ಹರುಣ, ಅಮೀರ್ ಗೊರೇನಾಯಕ, ಐ.ಡಿ.ಬಿಜಲಿಖಾನ್, ಡಾ.ಬಶೀರ್ ಬೈರಾಕ್ದರ್, ಕಲೀಮಸಾಬ್ ಚೂರಿಖಾನ್, ಹುಸೇನ್‌ಸಾಬ್ ಪಠಾಣ, ದಾವಲ್ ಚೂರಿಖಾನ್, ಫಕ್ರುಸಾಬ್ ದೊಡಮನಿ, ಝಾಕೀರ್ ಬಾಗೋಜಿಕೊಪ್ಪ ಹಾಗೂ ಸವದತ್ತಿ ಮುಸ್ಲಿಂ ಅಸೋಸಿಯೇಷನ್, ಮುನವಳ್ಳಿ ಟಿಪ್ಪುಸುಲ್ತಾನ ತಂಜಿಮ್ ಕಮಿಟಿ, ಯರಗಟ್ಟಿ ಅಂಜುಮನ್ ಕಮಿಟಿಯವರು ಇದ್ದರು.