ರಮಜಾನ್ ನಿಮಿತ್ತ ಹರಪನಹಳ್ಳಿಯಲ್ಲಿ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಗತಿಕ, ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಪ್ರಮುಖರಾದ ಎಂ.ಷರೀಫ್, ಎಸ್.ಶಫಿ, ಎ.ಮುನ್ನೀಸ್, ಅಬ್ದುಲ್ ಶಾಲಂ, ಜಿ.ಜಾನ್ ಇತರರಿದ್ದರು. 
ಜಿಲ್ಲೆ

ರಮಜಾನ್ ದಾನ ಧರ್ಮದ ಸಂಕೇತ

ನರೇಶ್ ಕುಮಾರ್

ಹರಪನಹಳ್ಳಿ: ನೊಂದವರಿಗೆ ನೆರವಾಗುವುದೇ ನಿಜವಾದ ದೇವರ ಸೇವೆ ಎಂದು ಜಿಲ್ಲಾ ಸರ್ಕಾರಿ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಎಂ.ಷರೀಫ್ ಹೇಳಿದರು.

ರಮಜಾನ್ ನಿಮಿತ್ತ ಪಟ್ಟಣದ ಅಂಜುಮನ್ ಶಾದಿಮಹಲ್‌ನಲ್ಲಿ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಗತಿಕ, ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ರಮಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದೆ. ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೆ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಆಹಾರ ಕಿಟ್ ವಿತರಣೆ ಮಾಡುವುದೇ ಸಂಘದಧ್ಯೇಯವಾಗಿದೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್.ಉಸ್ಮಾನ್ ಮಾತನಾಡಿ, ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೆ ಒಂದು ತಿಂಗಳು ಉಪವಾಸ ವ್ರತಾಚರಣೆಯ ಉದ್ದೇಶವಾಗಿದೆ ಎಂದರು.

ಪ್ರಮುಖರಾದ ಎಂ.ಯಾಹ್ಯಾ, ಎಸ್.ಶಫಿ, ಎ.ಮುನ್ನೀಸ್, ಸಿ.ಆರ್.ಪಿ.ರುಕ್ಸಾನ, ಅಬ್ದುಲ್ ಶಾಲಂ, ಜಿ.ಜಾನ್, ಅಮಾನುಲ್ಲಾ, ನೂರುಲ್ಲಾ, ಶಬ್ಬೀರ್, ದಾದಾಪೀರ್, ಹುಸೇನ್ ಪೀರ್, ಜಮಾಲುದ್ದೀನ್, ಪೀರಾ ಸಾಹೇಬ್, ನಜೀರ್ ಎಸ್, ನಫೀಸಾ ಇತರರಿದ್ದರು.