ಮಾನ್ವಿ ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಕನ್ನಡಪರ ಹೋರಾಟಗಾರ ರಾಮಚಂದ್ರಪ್ಪ ರವರ 8 ಪುಣ್ಯ ಸ್ಮರಣೆ ಅಂಗವಾಗಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು. ಈ ವೇಳೆ ಮಕ್ಕಳ ತಜ್ಞ ಡಾ. ಶರಣಪ್ಪ, ಕೆ.ಎಂ.ಬಾಷಾ, ನಿವೃತ್ತ ಶಿಕ್ಷಕಿ ಮಧು ಪಾಂಡೆ, ಹಿರಿಯ ಸಾಹಿತಿ ಶರಣಗೌಡ ಯರದೊಡ್ಡಿ ಇದ್ದರು. 
ಜಿಲ್ಲೆ

ಭಾಷೆ ಬೆಳವಣಿಗೆ ಶ್ರಮಿಸಿದ ರಾಮಚಂದ್ರಪ್ಪ

ಮಾನ್ವಿ: ಕನ್ನಡಪರ ಹೋರಾಟಗಾರ ರಾಮಚಂದ್ರಪ್ಪ ಅವರು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಆಯೋಜನೆ ಜತೆಗೆ ಭಾಷೆ ಬೆಳೆವಣಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ತಾಜುದ್ಧಿನ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಕನ್ನಡಪರ ಹೋರಾಟಗಾರ ರಾಮಚಂದ್ರಪ್ಪ ಅವರ 8 ಪುಣ್ಯ ಸ್ಮರಣೆ ಅಂಗವಾಗಿ ಅಭಿಮಾನಿಗಳು ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಂಘ ಹುಟ್ಟು ಹಾಕಿ, ಪ್ರತಿಷ್ಠಾನದ ಮೂಲಕ ನೀಡಿ ಸಾಹಿತ್ಯ ಆಸಕ್ತರನ್ನು ಪ್ರೋತ್ಸಹಿಸುವ ಜೊತೆಗೆ ಬೆಳೆಸಿದ ಕೀರ್ತಿ ರಾಮಚಂದ್ರಪ್ಪಗೆ ಸಲ್ಲುತ್ತದೆ ಎಂದರು.

ಮಕ್ಕಳ ತಜ್ಞ ಡಾ. ಶರಣಪ್ಪ, ಮನೋಹರ್ ವಿಶ್ವಕರ್ಮ ವಕೀಲರು, ವೆಂಕಣ್ಣ ಯಾದವ, ಸಮಾಜ ಸೇವಕ ಕೆ.ಎಂ. ಭಾಷಾ, ನಿವೃತ್ತ ಶಿಕ್ಷಕಿ ಮಧು ಪಾಂಡೆ, ಹಿರಿಯ ಸಾಹಿತಿ ಶರಣಗೌಡ ಯರದೊಡ್ಡಿ, ಕರವೇ ತಾಲೂಕ ಅಧ್ಯಕ್ಷ ಡಿ. ಬಸವನಗೌಡ, ಸತ್ಯನಾರಾಯಣ, ಮಲ್ಲಿಕಾರ್ಜುನಗೌಡ, ಶರಣಪ್ಪ, ಸವಿತಾ ಸಮಾಜದ ಮುಖಂಡರಾದ ವೀರೇಶ, ಶಿಕ್ಷಕ ಗುಂಡಪ್ಪ, ಅಮರೇಶ, ಚಾಂದ್‌ಪಾಷಾ ಇದ್ದರು.