ಜಿಲ್ಲೆ

ಬಾಲರಾಮನ ಉತ್ಸವ ಮೂರ್ತಿಗೆ ಸ್ವರ್ಣ ಪೀಠ ಪ್ರಭಾವಳಿ ಅರ್ಪಣೆ

Mangaluru - Hariprasad Rai



ಮಂಗಳೂರು : ಕಾಶಿಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಬಾಲರಾಮನಿಗೆ 70 ಲಕ್ಷ ರೂ.ಮೌಲ್ಯದ ಸ್ವರ್ಣ ಪೀಠ ಪ್ರಭಾವಳಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನ ಉತ್ಸವ
ಮೂರ್ತಿಗೆ ಸಮರ್ಪಿಸಲಾಯಿತು.
ಈ ಸ್ವರ್ಣ ಪೀಠ ಪ್ರಭಾವಳಿಗೆ ಕೋಟದ ಕಾಶೀ ಮಠದಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಮಂಗಳೂರು ನಗರ ದಕ್ಷಿಣದ ಶಾಸಕ ಡಿ.ವೇದವ್ಯಾಸ ಕಾಮತ್ ಅವರಿಗೆ ಹಸ್ತಾಂತರಿಸುವ ಮೂಲಕ ಅಯೋಧ್ಯೆಗೆ ಕಳುಹಿಸಲಾಗಿತ್ತು.
ಕಾಶೀ ಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಬಾಲರಾಮನಿಗೆ ಬೆಳ್ಳಿಯ ಪಲ್ಲಕ್ಕಿಯೂ ಸಮರ್ಪಣೆಯಾಗಿದೆ. ಸ್ವರ್ಣ ಪೀಠ ಪ್ರಭಾವಳಿ ಸಮರ್ಪಣೆ ನನ್ನ ಜೀವನದ ಪರಮ ಭಾಗ್ಯವಾಗಿದ್ದು ಪೂಜ್ಯ ಗುರುಗಳ ಹಾಗೂ ಪ್ರಭು ಶ್ರೀರಾಮನ ಸೇವಾ ಕಾರ್ಯಕ್ಕಿಂತ ಮಿಗಿಲಾದುದು ಬೇರಾವುದೂ ಇಲ್ಲವೆಂದು ಶಾಸಕ ಡಿ.ವೇದವ್ಯಾಸ ಕಾಮತ್ ಈ ಸಂದರ್ಭ ಹೇಳಿದರು.