ಜಿಲ್ಲೆ

ನಗರದಲ್ಲಿ 63ಅಡಿ ಎತ್ತರದ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಗೆ ಶಂಕುಸ್ಥಾಪನೆ

ಪಂಕಜ ಕೆ.ಎಂ.

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿನ ಶ್ರೀ ರಾಮ ಸೇವಾ ಮಂಡಳಿಯ ಶ್ರೀರಾಮಮಂದಿರ ದೇವಸ್ಥಾನ ಅವರಣದಲ್ಲಿ 63ಅಡಿ ಎತ್ತರದ ಶ್ರೀರಾಮಾಂಜನೇಯರ ಬೃಹತ್ ಪ್ರತಿಮೆಗೆ ಬುಧವಾರ ಶಂಕುಸ್ಥಾಪನೆ ಕಾರ್ಯ ಜರುಗಿತು.

ಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು. ಶ್ರೀ ರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್. ಶ್ರೀಧರ್, ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.

ಈ ವೇಳೆ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಶ್ರೀರಾಮಚಂದ್ರ ಭಾರತದ ಅಸ್ಮಿತೆ, ಧೈವದ ಪ್ರತೀಕ. ಲಕ್ಷಾಂತರ ವರ್ಷಗಳಿಂದ ಎಲ್ಲರ ಹೃದಯಲ್ಲಿ ರಾಮನ ಆದರ್ಶವಿದೆ. ಶ್ರೀರಾಮ ಎಂದರೆ ಸಕಲ ದೈವ ಗುಣವುಳ್ಳ ಮೂರ್ತ ಸ್ವರೂಪ. ಹಾಗಾಗಿಯೇ ಮಹಾತ್ಮಗಾಂಧಿ ಅವರು ಭಾರತ ರಾಮರಾಜ್ಯ ಆಗಬೇಕು ಎಂದು ಹೇಳುತ್ತಿದ್ದರು ಎಂಬುದನ್ನು ಸ್ಮರಿಸಿದರು.

ಶ್ರೀ ಸಿದ್ದಲಿಂಗಾ ಸ್ವಾಮೀಜಿ ಮಾತನಾಡಿ, ತತ್ವ, ನಿತಿಯಿಂದ ಮನುಷ್ಯ ಬದುಕಬೇಕು ಎಂದರೆ ಶ್ರೀರಾಮನ ಆದರ್ಶ ಗುಣಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ವಿಜ್ಞಾನ, ಜ್ಞಾನ ಎಷ್ಟೇ ಬೆಳದರೂ, ದೈವದ ಆಶೀರ್ವಾದ ಇರಲೇಬೇಕು ಎಂದು ಹೇಳಿದರು.

ಪ್ರತಿಮೆಯ ವಿಶೇಷತೆ: ಸುಮಾರು 63 ಅಡಿ ಎತ್ತದ ಕಾಂಕ್ರಿಟ್‌ನಿಂದ ನಿರ್ಮಾಣಗೊಳ್ಳರುವ ಶ್ರೀರಾಮಾಂಜನೇಯ ಪ್ರತಿಮೆ ವಾಟರ್ ್ರೂಪ್ ಆಗಿದೆ. ಶ್ರೀರಾಮ ನಿಂತಿರುವ ಹಾಗೂ ಆಂಜನೇಯ ಕುಳಿತು ರಾಮನಿಗೆ ನಮಸ್ಕಾರ ಮಾಡುವ ಭಂಗಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ನೆಲ ಪೀಠ 8 ಅಡಿ 30 ಟನ್ ಕಬ್ಬಿಣ ಬಳಸಿ, 30 ಕಾರ್ಮಿಕರು ಆರು ತಿಂಗಳಲ್ಲಿ ಪ್ರತಿಮೆ ಸಿದ್ಧಪಡಿಸಲಿದ್ದಾರೆ. ರಾಜ್ಯದ ಅತೀ ಎತ್ತರದ ಈ ಪ್ರತಿಮೆಯನ್ನು ಶಿಲ್ಪಶಾಸ ಅಧ್ಯಯನಕಾರ ಜೀವನ್ ಕಲಾ ಸನ್ನಿಧಿಯ ಶಿಲ್ಪಿ ಜೀವನ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗುವುದು.