ಹಾರೂಗೇರಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಗೋಪೂಜೆ ಸಲ್ಲಿಸಲಾಯಿತು. ಮುರಳೀಧರ ಬಾಗಲಕೋಟೆ, ಅನಿಲ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಶ್ರೀಧರ ಲೋಕಾಪುರ ಇತರರಿದ್ದರು. 
ಜಿಲ್ಲೆ

ರಾಮಮಂದಿರ ದೇಶದ ಅಸ್ಮಿತೆ

ರಾಘವೇಂದ್ರಗೌಡ ಭೀ ಪಾಟೀಲ್

ಹಾರೂಗೇರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ತ ಪಟ್ಟಣದ ಹನುಮಾನ ಮಂದಿರದಲ್ಲಿ ಸೋಮವಾರ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಗೋಪೂಜೆ ನೆರವೇರಿಸಿ ಹನುಮಾನ ದೇವರಿಗೆ ಮಹಾಭಿಷೇಕ ಹಾಗೂ ಪೂಜೆ ಸಲ್ಲಿಸಿದರು.

ಗೋಪಾಲ ನಾಯಿಕ ಮತ್ತು ವಿಜಯ ಪತ್ತಾರ ನೇತೃತ್ವದಲ್ಲಿ ಶ್ರೀರಾಮನ ಮೂರ್ತಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುಮಂಗಲೆಯರು ಆರತಿ, ಕುಂಭಮೇಳ ಹೊತ್ತು ಸಾಗಿದರು. ವಿವೇಕಾನಂದ ನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಹೋಮ-ಹವನ ಜರುಗಿತು. ಪ್ರಮೋದ ಮತಾಲಿಕ ಮಾತನಾಡಿ, ರಾಷ್ಟ್ರೀಯ ಅಸ್ಮಿತೆಯುಳ್ಳ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಈ ಸಂಭ್ರಮ ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣ ಎಂದರು.

ಅರ್ಚಕರಾದ ಮುರಳೀಧರ ಬಾಗಲಕೋಟೆ, ಅನಿಲ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಶ್ರೀಧರ ಲೋಕಾಪುರ, ಪುರಸಭೆ ಸದಸ್ಯ ಪರಗೌಡ ಉಮರಾಣಿ, ವಿಕ್ರಮ ಪತ್ತಾರ, ಅನಿಲ ಕಾಂಬಳೆ, ಮೌನೇಶ ಬಡಿಗೇರ, ಭರತೇಶ ಹುಕ್ಕೇರಿ, ರವಿ ಹಂದಿಗುಂದ ಇದ್ದರು.