ಜಿಲ್ಲೆ

ಇದೇನಾ ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿ? ಡಿ ಬಾಸ್​​ನನ್ನು ಟೀಕಿಸಿದ ರಾಮ್​ ಗೋಪಾಲ್ ವರ್ಮಾ

ಬೆಂಗಳೂರು: ನಟ ದರ್ಶನ್ ಸ್ನೇಹಿತೆ ಆಗಿರುವ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ. ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಈ ಕುರಿತಾಗಿ ಸ್ಟಾರ್​ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಎಲ್ಲೂ ದರ್ಶನ್​ ಅವರ ಹೆಸರು ಬಳಸದೆ ಟ್ವೀಟ್​​ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾ ಇರುತ್ತಾರೆ. ಹಲವು ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಈಗ ಆರ್​ಜಿವಿ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರು ಕೊಲೆ ಆರೋಪ ಹೊತ್ತಿದ್ದಾರೆ. ಆದಾಗ್ಯೂ ಅವರ ಪರ ಫ್ಯಾನ್ಸ್ ವಹಿಸಿಕೊಂಡು ಬರುತ್ತಿದ್ದಾರೆ. ಅವರೆಲ್ಲರಿಗೂ ಮುಟ್ಟಿನೋಡಿಕೊಳ್ಳುವಂತೆ ರಾಮ್ ಗೋಪಾಲ್ ವರ್ಮಾ ಉತ್ತರಿಸಿದ್ದಾರೆ. ಅವರು ಮಾಡಿರೋ ಟ್ವೀಟ್ ವೈರಲ್ ಆಗುತ್ತಿದೆ.

‘ನಿರ್ದೇಶಕರು ಚಿತ್ರಕಥೆ ಬರೆದ ಬಳಿಕವೇ ಸಿನಿಮಾದ ಶೂಟಿಂಗ್ ಆರಂಭಿಸುತ್ತಾರೆ. ಹಲವು ಸಂದರ್ಭದಲ್ಲಿ ನಿರ್ದೇಶಕರು ಸೆಟ್​ನಲ್ಲೂ ಚಿತ್ರಕಥೆ ಬರೆಯುತ್ತಾರೆ. ಆದರೆ, ದರ್ಶನ್ ಪ್ರಕರಣದಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮ. ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಭಾಗಿ ಆಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಥೆ ಹೇಳುತ್ತಿದ್ದಾರೆ ಎಂಬರ್ಥದಲ್ಲಿ ಆರ್​ಜಿವಿ ಮಾತನಾಡಿದ್ದಾರೆ.

‘ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುತ್ತಿರುವ ಅಭಿಮಾನಿಯನ್ನು ಕೊಲ್ಲಲು ಸ್ಟಾರ್​ ನಟ ಡೈ ಹಾರ್ಡ್ ಅಭಿಮಾನಿಗಳನ್ನೇ ಬಳಿಸಿಕೊಂಡಿದ್ದಾರೆ. ಇದು ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿಯ ವಿಲಕ್ಷಣತೆಗೆ ಸೂಕ್ತ ಉದಾಹರಣೆಯಾಗಿದೆ. ತಾವು ಆರಾಧಿಸುವ ನಟ ಹೀಗೆಯೇ ಇರಬೇಕು ಎಂದು ಬಯಸುತ್ತಾ ಹೋದಾಗ ಆಗುವ ಅಡ್ಡಪರಿಣಾಮಗಳು ಇವು’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.