ಜಿಲ್ಲೆ

ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಟಗರು ಕಾಳಗ

ನರಗುಂದ: ತಾಲೂಕಿನ ಸಂಕಧಾಳ ಗ್ರಾಮದ ಶ್ರೀ ಅವಧೂತ ಕಲ್ಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಏ. 27ರಂದು ಸಂಜೆ 4ಗಂಟೆಗೆ ಶ್ರೀಮಠದ ಆವರಣದಲ್ಲಿ ಜಿದ್ದಾಜಿದ್ದಿನ ಟಗರಿನ ಕಾಳಗ ಏರ್ಪಡಿಸಲಾಗಿದೆ. ಡಾ. ಸುರೇಶ ಭೂಮಣ್ಣವರ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ವಿಜೇತ ಟಗರುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.