ಮಡಿಕೇರಿ:
ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಭಾನುವಾರ ನಡೆದ ಮಾಜಿ ಸೈನಿಕರು, ಅವರ ಅವಲಂಬಿತರು ಹಾಗೂ ವೀರನಾರಿಯರ ರ‍್ಯಾಲಿ ಮೆಚ್ಚುಗೆಗೆ ಪಾತ್ರವಾಯಿತು. ಮಾಜಿ ಸೈನಿಕರನ್ನು ಸಬಲೀಕರಣಗೊಳಿಸಲು, ಅವರ ಕಲ್ಯಾಣ ಮತ್ತು ಪುನರ್ವಸತಿಗೆ ಅನುಕೂಲವಾಗುವಂತೆ ಈ ರ‍್ಯಾಲಿ ಆಯೋಜಿಸಲಾಗಿತ್ತು. ಎಂಇಜಿ ಆಶ್ರಯದಲ್ಲಿ ಕರ್ನಾಟಕ ಪ್ರಧಾನ ಕಚೇರಿ ಮತ್ತು ಕೇರಳ ಉಪ ಪ್ರದೇಶದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ 600 ಕ್ಕೂ ಹೆಚ್ಚು ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಅವಲಂಬಿತರು ಭಾಗವಹಿಸಿದ್ದರು.
ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಶೌರ್ಯದ ಶ್ರೀಮಂತ ಪರಂಪರೆಯ ಹೆಗ್ಗಳಿಕೆ ಹೊಂದಿರುವ ಕೊಡಗಿನ ಯೋಧರು ಈ ರ‍್ಯಾಲಿಯ ಪ್ರಯೋಜನ ಪಡೆದುಕೊಂಡರು.
ಮಾಜಿ ಯೋಧರ ಶ್ರೇಯೋಭಿವೃದ್ಧಿಗಾಗಿ ರೂಪಿತವಾಗಿರುವ ‘ಸ್ಪರ್ಶ್’ ಪಿಂಚಣಿ ವಿತರಣಾ ವ್ಯವಸ್ಥೆ, ಇಸಿಹೆಚ್‌ಎಸ್ ಸೇವೆಗಾಗಿ ನವೀಕೃತಗೊಂಡ ಆ್ಯಪ್ ವ್ಯವಸ್ಥೆ, ಚಾಟ್ ವ್ಯವಸ್ಥೆಗಾಗಿ ರೂಪಿತವಾಗಿರುವ ‘ಸಂಬAಧ್’, ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ನೂತನ ಆ್ಯಪ್ ‘ವೋರಾ’ದ ಬಗ್ಗೆ ರ‍್ಯಾಲಿಯಲ್ಲಿ ಮಾಹಿತಿ ನೀಡಲಾಯಿತು.
ಈ ರ‍್ಯಾಲಿಯಲ್ಲಿ ಮಾಜಿ ಸೈನಿಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಂಟ್ರೋಲರ್ ಡಿಫೆನ್ಸ್ ಅಕೌಂಟ್ (ಸಿಡಿಎ) ಪ್ರತಿನಿಧಿಗಳು, ಭಾರತೀಯ ಸೇನಾ ದಾಖಲೆಗಳ ಕಚೇರಿಗಳು ಹಾಗೂ ಬ್ಯಾಂಕ್ ಸಹಾಯ ಕೇಂದ್ರಗಳು ಸ್ಟಾಲ್‌ಗಳು ಇದ್ದವು. ಈ ಸ್ಟಾಲ್‌ಗಳ ಮೂಲಕ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಪಿಂಚಣಿ, ದಾಖಲಾತಿಗೆ ಸಂಬAಧಿಸಿದAತೆ ಸಿಬ್ಬಂದಿ ಜತೆ ನೇರವಾಗಿ ಸಂವಹನ ನಡೆಸಿ ತಮ್ಮ ಗೊಂದಲಗಳನ್ನು ಪರಿಹಿರಿಸಿಕೊಂಡರು. ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಇತ್ತೀಚೆಗೆ ಅನುಷ್ಠಾನಕ್ಕೆ ಬಂದಿರುವ ಕಾರ್ಯಕ್ರಮಗಳ ಮಾಹಿತಿ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ರ‍್ಯಾಲಿಗೆ ಆಗಮಿಸಿದ್ದ ಮಾಜಿ ಸೈನಿಕರು, ವೀರನಾರಿಯರು ಹಾಗೂ ಅವರ ಅವಲಂಬಿತರಿಗೆ ಅವರ ಆರೋಗ್ಯ ಮತ್ತು ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ಕಣ್ಣು, ದಂತ ಮತ್ತು ಕ್ಯಾನ್ಸರ್ ತಪಾಸಣೆಯನ್ನೂ ನಡೆಸಲಾಯಿತು. ರಕ್ಷಣಾ ಕೇಂದ್ರ ಕಚೇರಿ, ಕೇಂದ್ರ ಮತ್ತು ರಾಜ್ಯ ಸರ್ಕಾರದದ ಮೂಲಕ ಮಾಜಿ ಸೈನಿಕರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಭಾರತ ಪ್ರದೇಶದ ಕಮಾಂಡಿAಗ್ ಆಫಿಸರ್ ಲೆಫ್ಟಿನೆಂಟ್ ಜನರಲ್ ಕೆ.ಎಸ್.ಬ್ರಾರ್ ಎವಿಎಸ್‌ಎಂ, ರ‍್ಯಾಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮಾಜಿ ಯೋಧರನ್ನು ಅಭಿನಂದಿಸಿದರು. ಮಾಜಿ ಯೋಧರು, ವೀರನಾರಿಯರು ಹಾಗೂ ಅವಲಂಬಿತರ ಹಿತಾಸಕ್ತಿ ಮತ್ತು ಕಲ್ಯಾಣದ ಭರವಸೆ ನೀಡಿದರು. ದೇಶಕ್ಕಾಗಿ ಮಾಡಿದ ಸೇವೆಗಳು ಮತ್ತು ತ್ಯಾಗಗಳಿಗಾಗಿ ಕೃತಜ್ಞತೆ ಅರ್ಪಿಸಿದರು.